ಅರುಣೋದಯ ವಿಶೇಷ ಮಕ್ಕಳಿಗೆ ಲಯನ್ಸ್‌ ಸಿಟಿ ವತಿಯಿಂದ ಆಸನದ ವ್ಯವಸ್ಥೆ

ಕಾರ್ಕಳ : ಕಾರ್ಕಳದಲ್ಲಿ ಬೆಳ್ಳಿಹಬ್ಬ ಆಚರಿಸುತ್ತಿರುವ ಅರುಣೋದಯ ವಿಶೇಷ ಮಕ್ಕಳ ಶಾಲೆಯ ವಿಕಲಚೇತನ ಮಕ್ಕಳಿಗೆ ಕುಳಿತುಕೊಳ್ಳಲು ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ಕುರ್ಚಿಗಳನ್ನು ಅ. 7ರಂದು ಹಸ್ತಾಂತರಿಸಲಾಯಿತು. ಆರಾಮ್‌ ಫರ್ನೀಚರ್ಸ್‌ನ ಮಾಲಕರು ಮತ್ತು ಲಯನ್ಸ್‌ ಸದಸ್ಯ ಟಿ. ಯೋಗೇಶ್‌ ನಾಯಕ್ ಮಾತನಾಡಿ, ಸೇವೆ, ಸಹಕಾರ ಮತ್ತು ಸಂಘಟನೆಯ ಮೂಲಕ ಇಂದು ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ಹಲವಾರು ಸೇವಾ ಕಾರ್ಯಕ್ರಮವನ್ನು ಮಾಡುತ್ತಾ ಬಂದಿರುತ್ತೇವೆ. ಇಂದು ವಿಶೇಷ ಶಾಲಾ ಮಕ್ಕಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನು ಮುಂದೆಯೂ ಸಹಾಯಹಸ್ತ ಚಾಚುವಲ್ಲಿ ಲಯನ್ಸ್‌ ಸಿಟಿಯು ಬದ್ಧವಾಗಿದೆ ಎಂದರು.

ಈ ಸಂದರ್ಭದಲ್ಲಿ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಅಧ್ಯಕ್ಷ ಗೋಪಾಲ್‌ ಅಂಚನ್‌, ಕಾರ್ಯದರ್ಶಿ ನಿಹಾಲ್‌ ಶೆಟ್ಟಿ ಜಕ್ಕನ್ಮಕ್ಕಿ, ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್‌, ಅರುಣೋದಯ ಸ್ಥಂಸ್ಥೆಯ ಮ್ಯಾನೇಜಿಂಗ್‌ ಟ್ರಸ್ಟಿ ಜೆಸಿಂತಾ ಡಿಮೆಲ್ಲೊ, ಕಾರ್ಯದರ್ಶಿ ಪ್ರೆಸಿಲ್ಲಾ ಪಿರೆರಾ, ಖಜಾಂಚಿ ನೋವೆಲ್‌ ಡಿಸಿಲ್ವಾ, ಜೀವನ್‌ ವೆಲ್‌ಫೇರ್‌ ಟ್ರಸ್ಟ್‌ ಅರುಣೋದಯ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯರು ಕೆ. ಹನುಮಂತಪ್ಪ ಮತ್ತು ಶಾಲಾ ಪ್ರಮುಖರು ಉಪಸ್ಥಿತರಿದ್ದರು.



































































































error: Content is protected !!
Scroll to Top