ಸುಧೀಕ್ಷಾ ಪೈ ಅವರಿಗೆ ಪಿ.ಎಚ್.ಡಿ. ಪದವಿ

ಕಾರ್ಕಳ : ಸುಧೀಕ್ಷಾ ಪೈ ಅವರು ಶ್ರೀನಿವಾಸ ವಿಶ್ವವಿದ್ಯಾಲಯದಿಂದ ʼA Psychoanalytical Study of Women Protagonists in Select Novels of Preeti Shenoyʼ ಎಂಬ ಶೀರ್ಷಿಕೆಯ ಪ್ರಬಂಧವನ್ನು ಮಂಡಿಸಿ ಡಾಕ್ಟರ್ ಆಫ್ ಫಿಲಾಸಫಿ (Ph.D.) ಪದವಿಯನ್ನು ಪಡೆದಿದ್ದಾರೆ. ಅವರು ಲೂರ್ದುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ.

ಸುಧೀಕ್ಷಾ ಪೈ ಅವರು ಬಾಳೆಹೊನ್ನೂರಿನ ಸುರೇಂದ್ರ ಪೈ ಮತ್ತು ಸುಧಾ ಪೈ ದಂಪತಿ ಪುತ್ರಿ. ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ಉಪನ್ಯಾಸಕ ಮಹೇಶ್ ಶೆಣೈ ಅವರ ಪತ್ನಿ ಹಾಗೂ ಪರಪ್ಪಾಡಿ ಸರಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ಅವರ ಸೊಸೆ. ಪ್ರಸ್ತುತ ಅವರು ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಮೊದಲು ಎನ್‌ಎಂಎಎಮ್‌ಐಟಿ (NMAMIT) ನಿಟ್ಟೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು.













































































error: Content is protected !!
Scroll to Top