ಕಾರ್ಕಳ : ಆರ್‌ಸಿಸಿ ಗುತ್ತಿಗೆದಾರರ ಸಂಘದ ಜತೆ ಕಾರ್ಯದರ್ಶಿ ಅಯ್ಯಪ್ಪನಗರದ ರವಿ ಸಾಸ್ತಾನ ಅವರಿಗೆ ಪರ್ಸೊಂದು ದೊರೆತಿದ್ದು, ಅದನ್ನು ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪರ್ಸ್‌ನಲ್ಲಿ 16,562 ರೂ. ನಗದು ಹಾಗೂ ಅವಶ್ಯ ದಾಖಲೆಗಳಿದ್ದು, ವಾರಸುದಾರರಾದ ಜೋಡುಕಟ್ಟೆ ಹರೀಶ್ ಅವರಿಗೆ ಆರ್‌ಸಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ವಾರಸುದಾರರಿಗೆ ಪರ್ಸ್ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಆರ್‌ಸಿಸಿ ಗುತ್ತಿಗೆದಾರ











