ಆ.16 : ಶ್ರೀ ಮಾರುತಿ ಫ್ರೆಂಡ್ಸ್‌ ಅನ್ಯಾರ್‌ಕಟ್ಟೆ – 27ನೇ ವರ್ಷದ ಮೊಸರು ಕುಡಿಕೆ ಉತ್ಸವ

ಕಾರ್ಕಳ : ಶ್ರೀ ಮಾರುತಿ ಫ್ರೆಂಡ್ಸ್‌ ಅನ್ಯಾರ್‌ಕಟ್ಟೆ ಮಾರುತಿ ನಗರ, ಕೌಡೂರು, ನಿಂಜೂರು ಇದರ 27ನೇ ವರ್ಷದ ಮೊಸರು ಕುಡಿಕೆ ಉತ್ಸವ ಆ. 16ರಂದು ಅನ್ಯಾರ್‌ಕಟ್ಟೆಯಲ್ಲಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ಗೋಪೂಜೆ, ಮಧ್ಯಾಹ್ನ 2 ಗಂಟೆಯಿಂದ ಮುದ್ದುಕೃಷ್ಣ ಸ್ಪರ್ಧೆ, ಸಂಜೆ 5 ಗಂಟೆಯಿಂದ ಮಡಕೆ ಒಡೆಯುವುದು, ಸಂಜೆ 6 ಗಂಟೆಯಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆಯಾಗಿ 8.30ರಿಂದ ಸಾಯಿಶಕ್ತಿ ಕಲಾಬಳಗ ಉರ್ವ ಚಿಲಿಂಬಿ ಮಂಗಳೂರು ಇವರಿಂದ ಅದ್ಧೂರಿ ತುಳು ಪೌರಾಣಿಕ ನಾಟಕ ಜೋಡು – ಜೀಟಿಗೆ ಪ್ರದರ್ಶನಗೊಳ್ಳಲಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

























































































































error: Content is protected !!
Scroll to Top