ಕರಾಟೆ ಪಂದ್ಯಾಟ – ಕ್ರೈಸ್ಟ್‌ಕಿಂಗ್‌ ಶಿಕ್ಷಣ ಸಂಸ್ಥೆಯ 7 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

ಕಾರ್ಕಳ : ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇದರ ಆಶ್ರಯದಲ್ಲಿ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ಮತ್ತು ಪ್ರಾಥಮಿಕ ವಿಭಾಗದ ಕರಾಟೆ ಪಂದ್ಯಾಟದಲ್ಲಿ ಕ್ರೈಸ್ಟ್‌ಕಿಂಗ್‌ ಆಂಗ್ಲಮಾದ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 7 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದಿಂದ 9ನೇ ತರಗತಿಯ ಆಯುಶ್ರೀ ಎಂ. ಆಚಾರ್ಯ, ಸಾನ್ವಿ ಎಂ. ನಾಯಕ್, 8ನೇ ತರಗತಿಯ ಸುದೀಕ್ಷಾ, ಅದ್ವಿತ್ ಡಿ. ವಿ., ನಾಗೇಶ್ ಭಟ್ ಮತ್ತು ಪ್ರಾಥಮಿಕ ವಿಭಾಗದಿಂದ 7ನೇ ತರಗತಿಯ ಅಕ್ಷಯ್ ಪ್ರಭು, ಶಾರ್ವಿ ಬಾಲಕೃಷ್ಣ ಪೂಜಾರಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದವರು. ಇದೇ ಪಂದ್ಯಾಟದಲ್ಲಿ 9ನೇ ತರಗತಿಯ ಲಕ್ಷಣ್ಯ ಪಿ. ಆರ್., ಶಗುನ್ ಎಸ್. ವರ್ಮಾ, 10ನೇ ತರಗತಿಯ ಅಬ್ದುಲ್ ಅಝೀಝ್ ಸಫ್ವಾನ್ ಮತ್ತು ಡೇನಿಯಲ್ ಟಿ. ಕೆ. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.



































































































error: Content is protected !!
Scroll to Top