ರಾಮಸಾಗರಗಾಮಿನೀ : ಸಪ್ತಮ ಸೋಪಾನ ಚಿತ್ರಕೂಟದ ಚಿತ್ರ – ಉಪನ್ಯಾಸ

ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025ರ ತಿಂಗಳ ಕಾರ್ಯಕ್ರಮ ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಮಾಲೆಯ ಜುಲೈ ತಿಂಗಳ ಕಾರ್ಯಕ್ರಮದಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಸಪ್ತಮ ಸೋಪಾನ ಚಿತ್ರಕೂಟದ ಚಿತ್ರ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು. ವಿದ್ವಾಂಸ ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಉಪನ್ಯಾಸ ನೀಡಿ ರಾಮ ವನವಾಸಕ್ಕೆ ತೆರಳುವ ಸಂದರ್ಭವನ್ನು ವಿವರಿಸಿದರು.

ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮತ್ತು ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೀರ್ತನಕಾರ ವೈ ಅನಂತ ಪದ್ಮನಾಭ ಭಟ್ ಪ್ರಾರ್ಥಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. ಮಾಲತಿ ವಸಂತರಾಜ್ ವಂದಿಸಿದರು.



































































































error: Content is protected !!
Scroll to Top