ವಿದ್ಯಾರ್ಥಿಗಳು ನಾಯಕತ್ವ ಗುಣ ಮೈಗೂಡಿಸಿಕೊಳ್ಳಬೇಕು : ನವೀನ್ ಚಂದ್ರ ಶೆಟ್ಟಿ

ಕಾರ್ಕಳ : ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳವುದರಿಂದ ದೇಶದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬಹುದು. ಆದ್ದರಿಂದ ವಿದ್ಯಾರ್ಥಿಯಾಗಿರುವಾಗಲೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹೇಳಿದರು. ಅವರು ಎಸ್.ವಿ.ಟಿ. ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿನ ನೂತನ ಇಂಟರ್ಯಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಇಂಟರ್ಯಾಕ್ಟ್ ಕ್ಲಬ್‌ನ ಚೇರ್ಮನ್ ಬಾಲಕೃಷ್ಣ ದೇವಾಡಿಗ ಕ್ಲಬ್‌ನ ಬಗ್ಗೆ ಮಾಹಿತಿ ನೀಡಿದರು. ಪ್ರಾಂಶುಪಾಲ ನೇಮಿರಾಜ್ ಶೆಟ್ಟಿ ಹಾಗೂ ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್ ಸಂದರ್ಭೊಚಿತವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಇಂಟರ್ಯಾಕ್ಟ್ ಕ್ಲಬ್‌ ಅಧ್ಯಕ್ಷೆ ವೀಶ್ವರಿ ತನ್ನ ತಂಡವನ್ನು ಪರಿಚಯಿಸಿ ಈ ವರ್ಷದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪೂರ್ವಾಧ್ಯಕ್ಷೆ ಅನ್ವಿತಾ ಹಿಂದಿನ ವರ್ಷದ ವರದಿ ಮಂಡಿಸಿದರು. ಕಾರ್ಯದರ್ಶಿ ಚೇತನ್ ನಾಯಕ್, ರೋಟರಿ ಕ್ಲಬ್‌ನ ಸದಸ್ಯರಾದ ವಸಂತ್ ಎಂ., ಇಕ್ಬಾಲ್ ಅಹ್ಮದ್, ಶೇಖರ್ ಎಚ್., ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇಂಟರಾಕ್ಟ್ ಕ್ಲಬ್‌ನ ಮಾರ್ಗದರ್ಶಕ ದೇವದಾಸ್ ಕೆರೆಮನೆ ಸ್ವಾಗತಿಸಿದರು. ಸುಶ್ಮಿತಾ ನಿರೂಪಿಸಿ, ಅರ್ಪಿತಾ ವಂದಿಸಿದರು.





























































































































error: Content is protected !!
Scroll to Top