ಜು. 13 : ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯೋತ್ಸವ – ಕೆ.ಕೆ.ಎಂ.ಪಿ. ಸುವರ್ಣ ಮಹೋತ್ಸವ – ವಿದ್ಯಾರ್ಥಿ ವೇತನ ಮತ್ತು ಸಹಾಯಧನ ವಿತರಣೆ

ಕಾರ್ಕಳ : ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ಉಡುಪಿ ಜಿಲ್ಲಾ ಶಾಖೆ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯೋತ್ಸವ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಸುವರ್ಣ ಮಹೋತ್ಸವ, ವಿದ್ಯಾರ್ಥಿ ವೇತನ ಮತ್ತು ಸಹಾಯಧನ ವಿತರಣೆ ಕಾರ್ಯಕ್ರಮ ಜು. 13ರಂದು ಕಾರ್ಕಳ ಹಿರಿಯಂಗಡಿಯ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಲಿದೆ.

ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೆ.ಕೆ.ಎಂ.ಪಿ. ರಾಜ್ಯಾಧ್ಯಕ್ಷ ಎನ್‌. ಸುರೇಶ್‌ ರಾವ್‌ ಮರಾಠೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕೆ.ಕೆ.ಎಂ.ಪಿ.ಯ ರಾಜ್ಯ ಗವರ್ನಿಂಗ್‌ ಕೌನ್ಸಿಲ್‌ ಛೇರ್‌ಮ್ಯಾನ್‌ ಎಸ್.‌ ಆರ್.‌ ಸಿಂಧ್ಯಾ, ಕೆ.ಕೆ.ಎಂ.ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಆರ್.‌ ಸುನಿಲ್‌ ಚೌವ್ಹಾಣ್‌, ಕೆ.ಕೆ.ಎಂ.ಪಿ. ರಾಜ್ಯ ಖಜಾಂಚಿ ಟಿ. ಆರ್.‌ ವೆಂಕಟರಾವ್‌ ಚೌವ್ಹಾಣ್‌, ಬಜಗೋಳಿಯ ಹೊಟೇಲ್‌ ಚಿರಾಗ್‌ ಮಾಲಕ ಕೆ. ಉಮೇಶ್‌ ರಾವ್‌, ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್‌ ದೇವಾಡಿಗ, ಸಹಕಾರ ಭಾರತಿ ಹಾಲು ಒಕ್ಕೂಟ ಪ್ರಕೋಷ್ಠ ರಾಜ್ಯ ಸಂಚಾಲಕ ಬೋಳ ಸದಾಶಿವ ಶೆಟ್ಟಿ, ಸಾಫ್ಟ್‌ವೇರ್‌ ಇಂಜಿನಿಯರ್‌ ಎಂಟರ್‌ಪ್ರೈಸಸ್‌ ಮೈಂಡ್ಸ್‌ ಡೈರೆಕ್ಟರ್‌ ನವೀನ್‌ ಸುವರ್ಣ, ಕೆ.ಕೆ.ಎಂ.ಪಿ. ಸಲಹೆಗಾರ ಬಿ. ಕೇಶವ ರಾವ್‌ ಮಾನೆ, ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕೇಸ್ತರ ಗಿರೀಶ್‌ ರಾವ್‌ ಭಾಗಿಯಾಗಲಿದ್ದಾರೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.











































































error: Content is protected !!
Scroll to Top