ಎಸ್‌ಕೆಪಿಎ ಮೂಲ್ಕಿ ವಲಯದ 20ನೇ ವರ್ಷಾಚರಣೆ

ಜನಾಕರ್ಷಿಸಿದ ಕೃಷಿ ಬದುಕಿನ ಸೊಬಗು ಫ್ಯಾಶನ್‌ ಶೋ

ಉಡುಪಿ : ಛಾಯಾಚಿತ್ರಗ್ರಾಹಕರಲ್ಲಿ ಉತ್ತಮ ಸಂಘಟನೆಯಿದೆ. ಹೀಗಾಗಿ ವೃತ್ತಿಯೊಂದಿಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುವಂತಾಗಿದೆ ಎಂದು ನಟ, ನಿರ್ಮಾಪಕ ಶೋಧನ್‌ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಜು. 10ರಂದು ಕಿನ್ನಿಗೋಳಿ ಪದ್ಮಾವತಿ ಸಭಾಭವನದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಶನ್ ಮೂಲ್ಕಿ ವಲಯದ 20 ನೇ ವರ್ಷಾಚರಣೆ ಸಮಾರೋಪ ಹಾಗೂ ಕೃಷಿ ಬದುಕಿನ ಸೊಬಗು ಫ್ಯಾಶನ್ ಶೋ‌ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೃಷಿ ಬದುಕಿನ‌ ಸೊಬಗು ಫ್ಯಾಶನ್‌ ಶೋ ವಿಭಿನ್ನ ಕಲ್ಪನೆಯಾಗಿದೆ. ಇಂತಹ ಕಾರ್ಯಕ್ರಮ ಮೂಲಕ ಕೃಷಿಕರ ಬದುಕಿನ ಅನಾವರಣವಾಗುವುದು. ಯುವ ಸಮುದಾಯಕ್ಕೆ ಕೃಷಿ ಮೇಲಿನ ಆಸಕ್ತಿ ವೃದ್ಧಿಸುವುದು ಎಂದರು.

ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌ ಮಾತನಾಡಿ, ಕೃಷಿ ಬದುಕಿನ ಫ್ಯಾಶನ್‌ ಶೋ ಆಯೋಜನೆ ಮೂಲಕ ಎಸ್‌ಕೆಪಿಎ ಮೂಲ್ಕಿ ವಲಯ ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಇಂತಹ ಕಾರ್ಯಕ್ರಮಗಳು ಕೃಷಿಕರ ಬಗ್ಗೆ ಹೆಮ್ಮೆ ಮೂಡಿಸುವುದರೊಂದಿಗೆ ಕೃಷಿ ಪರಂಪರೆ ಕುರಿತು ಅರಿವು, ಆಸಕ್ತಿ ಮೂಡಿಸುವುದು ಎಂದರು.

ಉಡುಪಿ ವಲಯ ಪ್ರಥಮ
ಸ್ಪರ್ಧೆಯಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದ್ದು ಉಡುಪಿ ವಲಯವು ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಬಹುಮಾನವನ್ನು ಮಂಗಳೂರು ವಲಯ ಹಾಗೂ ತೃತೀಯ ಬಹುಮಾನವನ್ನು ಕಾಪು ವಲಯ ತಮ್ಮದಾಗಿಸಿಕೊಂಡಿತು.
ಎಸ್‌ಕೆಪಿಎ ಮೂಲ್ಕಿ ವಲಯದ ಅಧ್ಯಕ್ಷ ಪ್ರಕಾಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಿಯದರ್ಶಿನಿ ಕೊ- ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾಡ್, ಎಸ್.ಕೆ.ಪಿ.ಎ. ಸಂಚಾಲಕ ಕರುಣಾಕರ್ ಕಾನಂಗಿ, ಪ್ರಧಾನ‌ ಕಾರ್ಯದರ್ಶಿ ದಯಾನಂದ ಬಂಟ್ವಾಳ್, ಎಸ್.ಕೆ.ಪಿ.ಎ. ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಮೂಲ್ಕಿ ವಲಯದ ಗೌರವಾಧ್ಯಕ್ಷ ಪ್ರಕಾಶ್ ಕೊಡ್ಮಣ್, ಮೂಲ್ಕಿ ವಲಯದ ನವೀನ್ ಚಂದ್ರ ಅಮೀನ್, ನಾಗೇಶ್ ಬಪ್ಪನಾಡು, ಮೋಹನ್ ರಾವ್, ಹರೀಶ್ ಬಿ. ಕೋಟ್ಯಾನ್, ಶಿವರಾಮ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಸುರೇಶ್ ಪದ್ಮನೂರು ಸ್ವಾಗತಿಸಿ, ಅರುಣ್ ಉಲ್ಲಂಜೆ ನಿರೂಪಿಸಿದರು. ಯೋಗೀಶ್ ಪಾವಂಜೆ ವಂದಿಸಿದರು.











































































error: Content is protected !!
Scroll to Top