ಮಾಳ ಗುರುಕುಲ ಶಾಲೆಗೆ ದಾನಿಗಳಿಂದ ಶೈಕ್ಷಣಿಕ ಪರಿಕರಗಳ ಕೊಡುಗೆ

ಕಾರ್ಕಳ : ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಿಂದ ಕೊಡಮಾಡಿದ 40 ಸಾ. ರೂ. ವೆಚ್ಚದ ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮ ಜೂ. 21ರಂದು ನೆರವೇರಿತು.
ಜ್ವಾಲಿ ಬಾಯ್ಸ್ ಬಜಗೋಳಿ ತಂಡ ಮತ್ತು ವಿಜಯರಾಘವ ಮರಾಠೆ ನೀಡಿದ ಉಚಿತ ನೋಟ್ ಪುಸ್ತಕ, ರವಿ ಮರಾಠೆ ನೀಡಿದ ಸಮವಸ್ತ್ರ, ವಿ. ಎಂ. ಮೈಕಲ್ ಮತ್ತು ವಾಸುದೇವ ನಾಯಕ್ ನೀಡಿದ ಲೇಖನ ಸಾಮಗ್ರಿಗಳು ಮತ್ತು ಇತರೆ ಶೈಕ್ಷಣಿಕ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಜಾನನ ಮರಾಠೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಸುಧಾಕರ ಡೋಂಗ್ರೆ, ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ, ರಘುರಾಮ ಶೆಟ್ಟಿ, ಯುವ ನ್ಯಾಯವಾದಿ ಕೆ. ವಿನೀತ್ ಕುಮಾರ್, ಪಂಚಾಯತ್‌ ಸದಸ್ಯ ರಜತ್ ರಾಮ್ ಮೋಹನ್, ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೆೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಆಡಳಿತ ಮಂಡಳಿಯ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕಿಯರಾದ ಶೋಭಾ ಸ್ವಾಗತಿಸಿ, ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ವಂದಿಸಿದರು.























































error: Content is protected !!
Scroll to Top