ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರ ವಜಾ ಆದೇಶ ರದ್ದು

ಕಾರ್ಕಳ : ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶವನ್ನು ಹೈಕೋರ್ಟ್‌ ನ್ಯಾಯಪೀಠವು ರದ್ದುಪಡಿಸಿದೆ. ಕಾನೂನು ಬಾಹಿರ ಆದೇಶದ ಮೂಲಕ ರಾಜಕೀಯ ಒತ್ತಡದಿಂದ ತನ್ನ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನವನ್ನು ಅನರ್ಹಗೊಳಿಸಲಾಗಿದೆ ಎಂದು ಬೋಳ ಸದಾಶಿವ ಶೆಟ್ಟಿ ಅವರು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದು ಜೂ. 12ರಂದು ವಿಚಾರಣೆ ನಡೆದು ತೀರ್ಪು ಪ್ರಕಟಿಸಿದೆ. ಸಹಾಯಕ ನಿಬಂಧಕರ ಆದೇಶದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌ ಛೀಮಾರಿ ಹಾಕಿದೆ.

ಹೈಕೋರ್ಟ್‌ ನ್ಯಾಯಪೀಠ ಇನ್ನು ಮುಂದೆ ಅರೆನ್ಯಾಯಿಕ ಪೀಠವಾದ ಸಹಕಾರಿ ಸಂಘಗಳ ನ್ಯಾಯಾಲಯ ಆದೇಶವನ್ನು ಮಾಡುವಾಗ ಕೆಲವೊಂದು ಮಾನದಂಡವನ್ನು ಪಾಲಿಸಬೇಕು. ಆನ್ ಲೈನ್ ಮೂಲಕ ಅರ್ಜಿದಾರರಿಗೆ ಮತ್ತು ಪ್ರತಿವಾದಿಗಳಿಗೆ ಸರಿಯಾದ ಮಾಹಿತಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಈ ಪ್ರಕರಣದ ಮೂಲಕ ಆದೇಶಿಸಿದ ಹೈಕೋರ್ಟ್‌ ನ್ಯಾಯಪೀಠ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಕ್ತ ನಿರ್ದೇಶನವನ್ನು ನೀಡಿ ಕೈಗೊಂಡ ಕ್ರಮದ ಬಗ್ಗೆ 4 ವಾರಗಳಲ್ಲಿ ವರದಿಯನ್ನು ನೀಡುವಂತೆ ಆದೇಶಿಸಿದೆ. ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಾನೂನು ಸಮ್ಮತವಲ್ಲದ ಈ ಆದೇಶದ ವಿರುದ್ದ ಹೈಕೋರ್ಟ್ ನೀಡಿದ ತೀರ್ಮಾನವು ಇನ್ನು ಮುಂದೆ ನಿರ್ಣಾಯಕ ಘಟ್ಟವಾಗಿ ಪರಿಣಮಿಸಲಿದೆ ಎಂದು ಹೈಕೋರ್ಟ್ ನ್ಯಾಯವಾದಿ ದೇವಿ ಪ್ರಸಾದ್‌ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.



































































































error: Content is protected !!
Scroll to Top