ಮೇ 8-16 : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಮಹೋತ್ಸವ – ಶ್ರೀ ಮನ್ಮಹಾರಥೋತ್ಸವ

ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಮಹೋತ್ಸವ ಮತ್ತು ಶ್ರೀ ಮನ್ಮಹಾರಥೋತ್ಸವವು ಮೇ 8ರಿಂದ 16ರ ತನಕ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇ.ಮೂ. ಕೆ. ಉಮೇಶ್‌ ತಂತ್ರಿಯವರ ಆಚಾರ್ಯತ್ವದಲ್ಲಿ ಪ್ರಧಾನ ಅರ್ಚಕರಾದ ಪುರೋಹಿತ್‌ ವಿಠಲ ಆಚಾರ್ಯ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.

ಧಾರ್ಮಿಕ ಕಾರ್ಯಕ್ರಮ
ಪ್ರತಿನಿತ್ಯವೂ ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು, ಮೇ 9 ರಂದು ಧ್ವಜಾರೋಹಣ ನೆರವೇರಲಿದೆ. ಮೇ 12ರಂದು ರಾತ್ರಿ 9.30 ಗಂಟೆಗೆ ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ. ಮೇ 14 ರಂದು ಮಧ್ಯಾಹ್ನ ಮಹಾಪೂಜೆ, ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಂಜೆ 5 ಗಂಟೆಗೆ ಭಂಡಾರ ಇಳಿದು ರಕ್ತೇಶ್ವರಿ, ಕಲ್ಕುಡ, ಪಂಜುರ್ಲಿ ದೈವಗಳಿಗೆ ನೇಮೋತ್ಸವ, ಮೇ 15 ರಂದು ಸಂಜೆ 5 ಗಂಟೆಗೆ ಭಂಡಾರ ಇಳಿದು ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ಜರುಗಲಿದೆ. ಮೇ 16 ರಂದು ಬೆಳಗ್ಗೆ ಸಂಪ್ರೋಕ್ಷಣೆ ನಡೆಯಲಿದೆ.

ಸಭಾ ಕಾರ್ಯಕ್ರಮ
ಮೇ 12ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶರಾದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು. ದೇವಸ್ಥಾನ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದು, ದಾಮೋದರ ಶರ್ಮಾ ಬಾರಕೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರು ಎಂ. ಕೆ. ಬಾಲಕೃಷ್ಣ ಆಚಾರ್ಯ ಉಳಿಯ, ಪ್ರಕಾಶ್‌ ಜ್ಯುವೆಲ್ಲರ್‌ ಮಾಲಕರು ಬಿ. ಪ್ರಕಾಶ್‌ ಆಚಾರ್ಯ ಭಾಗವಹಿಸಲಿದ್ದಾರೆ.

ಸನ್ಮಾನ
ಚಿನ್ನದ ಕುಸುರಿ ಕೆಲಸಗಾರರಾದ ರತ್ನಾಕರ ಆಚಾರ್ಯ ಕಟ್ಟಿಮಾರ್, ಎರಕ ಮತ್ತು ನಕ್ಷೆ ಕೆಲಸಗಾರರಾದ ಹರಿಶ್ಚಂದ್ರ ಆಚಾರ್ಯ ಅಂಡಿಂಜೆ, ಶಿಲಾ ಶಿಲ್ಪಿ ಪ್ರಕಾಶ್‌ ಆಚಾರ್ಯ ಅಯ್ಯಪ್ಪನಗರ ಕುಕ್ಕುಂದೂರು, ಕಾಷ್ಠ ಶಿಲ್ಪಿ ಪ್ರಶಾಂತ್‌ ಆಚಾರ್ಯ ಬಲಿಪರ ಪಾಡಿ ಮಿಯ್ಯಾರು, ಕಮ್ಮಾರ ಗಣಪತಿ ಆಚಾರ್ಯ ಶಿವಕೃಪಾ ರಾಮೆಟ್ಟುಪಲ್ಕೆ ಬಜಗೋಳಿ, ಜಯಕರ್ನಾಟಕ ಜಿಲ್ಲಾ ಘಟಕದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಗೀತಾಚಂದ್ರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಲಾಗುವುದು.

ಗೌರವ ಸಮರ್ಪಣೆ
ಕಾರ್ಕಳ ಕೂಡುವಳಿಕೆ ಮೊಕ್ತೇಸರರಾದ ಪೇಟೆ -1ರ ನಿತ್ಯಾನಂದ ಆಚಾರ್ಯ, ಪೇಟೆ-2ರ ಪಿ. ಎಚ್.‌ ಸುರೇಶ್‌ ಆಚಾರ್ಯ, ಎರ್ಲಪಾಡಿಯ ವಿಶ್ವನಾಥ ಆಚಾರ್ಯ ಹಾಗೂ ಹೊಸ್ಮಾರಿನ ಎನ್‌. ರತ್ನಾಕರ ಆಚಾರ್ಯ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಮೇ 9ರಂದು ಮಧ್ಯಾಹ್ನ 2 ಗಂಟೆಯಿಂದ ಮಂಗಳೂರಿನ ಯಕ್ಷಶ್ರೀ ಹರಿಬಳಗ ಅವರಿಂದ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳ ಮದ್ದಳೆ, ಮೇ 10ರಂದು ಸಂಜೆ 6.30ರಿಂದ ಗಣೇಶ್‌ ಆಚಾರ್ಯ ಶಿರ್ಲಾಲು ಸಾರಥ್ಯದ ಸಾಕ್ಷಿ ಕಲಾವಿದೆರ್‌ ಕಾರ್ಲ ತಂಡದ ಏರೆಗ್ಲಾ ಗೊತ್ತಾಪುಜಿ (ಏರ್‌ ಎಂಚ ಪಂಡ್ದ್) ನಾಟಕ ಪ್ರದರ್ಶನಗೊಳ್ಳಲಿದೆ. ಮೇ 11ರಂದು ಸಂಜೆ 6.30ರಿಂದ ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿಯ ಸಹಕಾರದಿಂದ ಮುಂಬಯಿಯ ಸಮನ್ವಿ ಸದಾನಂದ ಆಚಾರ್ಯ ಅವರ ಪ್ರಾಯೋಜಕತ್ವದಲ್ಲಿ ಮಕ್ಕಳ ಯಕ್ಷಗಾನ ಕಲಾತಂಡ ಯಕ್ಷಬಿಂಧು ಕಲಾರಾಧನೆ ಪ್ರತಿಷ್ಠಾನ ಉಜಿರೆ ಇವರಿಂದ ಮಹಿಷ ಮರ್ಧಿನಿ ಯಕ್ಷಗಾನ ನಡೆಯಲಿದೆ. ಮೇ 12ರಂದು ಸಂಜೆ 5 ಗಂಟೆಯಿಂದ ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಸದಸ್ಯೆಯರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.





































error: Content is protected !!
Scroll to Top