ಉಪನ್ಯಾಸಕರ‌ ಅನ್ಯಕಾರ್ಯ ನಿಮಿತ್ತ ರಜೆ ಸೆಮಿಸ್ಟರ್ ಗೆ 4 ರಜೆ ಮಿತಿಗೊಳಿಸಿದ‌ ಶಿಕ್ಷಣ‌ ಇಲಾಖೆ

ಉಡುಪಿ: ಸರಕಾರಿ, ಅನುದಾನಿತ ಪದವಿ ಕಾಲೇಜಿನ‌ ಉಪನ್ಯಾಸಕರು, ಪ್ರಾಧ್ಯಾಪಕರು ಶೈಕ್ಷಣಿಕ ಕಾರ್ಯಾಗಾರ, ಸಮ್ಮೇಳನಗಳ ಹೆಸರಿನಲ್ಲಿ ಪಡೆಯುತ್ತಿದ್ದ ಅನ್ಯ ಕಾರ್ಯ ನಿಮಿತ್ತ ರಜೆಯನ್ನು ಒಂದು ಸೆಮಿಸ್ಟರ್‌ಗೆ ನಾಲ್ಕು ರಜೆಗೆ ಮಿತಿಗೊಳಿಸಿ ಕಾಲೇಜು ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ರಜೆಯನ್ನು‌ ಮೊದಲು ಆಯಾ ಕಾಲೇಜಿನ ಪ್ರಾಂಶುಪಾಲರು ಮಂಜೂರು ಮಾಡುತ್ತಿದ್ದರು. ಆದರೆ, ಇದೀಗ ಆ ಹೊಣೆ ಯನ್ನು ಪ್ರಾಂಶುಪಾಲರಿಂದ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ವರ್ಗಾಯಿಸಲಾಗಿದೆ. ಇದರಿಂದಾಗಿ ಇನ್ನು ಶೈಕ್ಷಣಿಕ ಕಾರ್ಯಾಗಾರ, ಸಮ್ಮೇಳನ ನಡೆಸುವವರು ನಿರ್ದಿಷ್ಟ ಕಾಲೇಜಿನ ಪ್ರಾಧ್ಯಾಪಕರು ಅಥವಾ ಉಪನ್ಯಾಸಕರನ್ನು ಕಳುಹಿಸಿ ಕೊಡಿ ಎಂದು ಮನವಿಯನ್ನು ಕಾಲೇಜಿನ ಪ್ರಾಂಶು ಪಾಲರ ಬದಲಾಗಿ ವಿಭಾಗದ ಜಂಟಿ ನಿರ್ದೇಶಕರಿಗೆ ಸಲ್ಲಿಸಬೇಕು. ಜಂಟಿ ನಿರ್ದೇಶಕರು ಅದನ್ನು ಪರಿಶೀ ಲಿಸಿ ಸಂಬಂಧಿಸಿದ ಪ್ರಾಂಶುಪಾಲರಿಗೆ ಸೂಚಿಸಲಿದ್ದಾರೆ.

ಈ ಹಿಂದೆ‌ ಈ‌ ರಜೆಗೆ ಮಿತಿಯಿರಲಿಲ್ಲ. ಪ್ರಾಂಶುಪಾಲರ ಮಟ್ಟದಲ್ಲೇ ರಜೆ‌ ನಿರ್ಧರಿತವಾಗುತ್ತಿದ್ದರಿಂದ ರಜೆಯ ಸಂಖ್ಯೆ ಹೆಚ್ಚಿಗೆ ಆಗುತ್ತಿದ್ದು ತರಗತಿಗೆ ಸಮಸ್ಯೆಯಾಗುತ್ತಿತ್ತು‌ ಎಂಬ ದೂರಿನ ಹಿನ್ನೆಲೆ‌ ಈ ಕ್ರಮ ಕೈಗೊಳ್ಳಲಾಗಿದೆ.















































































error: Content is protected !!
Scroll to Top