ಮಲ್ಪೆ ಹಲ್ಲೆ ಘಟನೆ : ಅನಿತಾ ಡಿಸೋಜ ಬೆಳ್ಮಣ್ ಖಂಡನೆ

ಕಾರ್ಕಳ : ಉಡುಪಿ ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮೀನು ಕದ್ದರೆಂಬ ಕಾರಣಕ್ಕೆ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಪ್ರಕರಣ ಇಡೀ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಇದು ಅತ್ಯಂತ ಖೇದಕರ ಹಾಗೂ ನಾಚಿಕೆಗೇಡಿನ ಘಟನೆ. ಕರಾವಳಿಗರು ಒಟ್ಟಾಗಿ ಖಂಡಿಸಬೇಕಾದ ವಿಚಾರವಿದು ಎಂದು ಕಾರ್ಕಳ ಮಹಿಳಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷೆ ಅನಿತಾ ಡಿಸೋಜ ಬೆಳ್ಮಣ್ ಖಂಡಿಸಿದ್ದಾರೆ.


ಉಡುಪಿ, ದ.ಕ. ಜಿಲ್ಲೆಯಲ್ಲಿ ಈ ರೀತಿಯ ಸಾರ್ವಜನಿಕ ವಿಚಾರಣೆ ಹಾಗೂ ಶಿಕ್ಷೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಇಲ್ಲಿನ ಜನತೆಯ ಮನೋಭಾವದಲ್ಲಿ ಉಂಟಾದ ಬದಲಾವಣೆಯನ್ನು ಸೂಚಿಸುತ್ತಿವೆ. ಇದು ಅಪಾಯದ ಸೂಚನೆ. ಮಲ್ಪೆ ಬಂದರಿನ ಘಟನೆ ಉತ್ತರ ಭಾರತದ ಗ್ರಾಮಗಳಲ್ಲಿ ಜಾತಿ ಹಾಗೂ ದುಡ್ಡಿನ ತೋಳ್ಬಲವುಳ್ಳವರು ಅಶಕ್ತರ, ಬಡವರ ಮೇಲೆ ನಡೆಸುವ ಅಮಾನವೀಯ ಹಲ್ಲೆ, ಹತ್ಯೆಗಳನ್ನು ನೆನಪಿಸುತ್ತದೆ. ಈ ಮನೋಸ್ಥಿತಿಯನ್ನು ಮೊಳಕೆಯಲ್ಲೇ ಚಿವುಟಬೇಕಾಗಿದೆ. ನಾಗರಿಕ ಸಮಾಜ ಈ ಕುರಿತು ಜಾಗೃತವಾಗಬೇಕಾಗಿದೆ ಎಂದು ಹೇಳಿದ್ದಾರೆ.







































error: Content is protected !!
Scroll to Top