ಕಾರ್ಕಳ : ಮಾಳ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವದ ಅಂಗವಾಗಿ ಮಾ.8ರಂದು ಶಾಲೆಯಲ್ಲಿ ಬಾಲೋತ್ಸವ ಕಾರ್ಯಕ್ರಮ ನಡೆಯಿತು.
ವಿದ್ಯಾವರ್ಧಕ ಸಂಘದ ಸದಸ್ಯ ರಘುಪತಿ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಾಲ್ಯವು ನಮ್ಮ ಜೀವನದಲ್ಲಿ ಸೌಂದರ್ಯ, ಮುಗ್ಧತೆ ನೈಜತೆಗಳಿಂದ ಕೂಡಿದ ಒಂದು ಅದ್ಭುತ ಹಂತ. ಬಾಲ್ಯದಲ್ಲಿ ನಾವು ಮೈಗೂಡಿಸಿಕೊಳ್ಳುವ ವಿಚಾರಗಳೇ ನಮ್ಮ ಜೀವನವನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಭವಿಷ್ಯ ರೂಪಿಸುವಂತಹ ವಾತಾವರಣವನ್ನು ಮನೆ ಮತ್ತು ಶೈಕ್ಷಣಿಕ ಸಂಸ್ಥೆಗಳು ಹೊಂದಬೇಕು ಎಂದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಗೀತಾ ಸೇರಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೋಷಕರಾದ ಸುಂದರಿ, ಸ್ಪರ್ಧಾ ಸಮಿತಿಯ ಸದಸ್ಯೆ ಸಂಧ್ಯಾ ಜೋಶಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಳ ಗ್ರಾಮ ವ್ಯಾಪ್ತಿಯ 35 ಮಕ್ಕಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿವಿಧ ಮನೋರಂಜನಾತ್ಮಕ ಆಟಗಳನ್ನು ಏರ್ಪಡಿಸಲಾಯಿತು.

























