ಅಜೆಕಾರು : ಅಕ್ರಮ ಮರಳು ಸಾಗಾಟದ ಟಿಪ್ಪರ್‌ ವಶಕ್ಕೆ

ಅಜೆಕಾರು : ಹೆಬ್ರಿ ತಾಲೂಕು ಕುಕ್ಕುಜೆ ಗ್ರಾಮದ ಸುವರ್ಣ ನದಿಯ ಸುಳಿಗುಂಡಿ ಎಂಬಲ್ಲಿಂದ ಮರಳು ತೆಗೆದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಟಿಪ್ಪರನ್ನು ಅಜೆಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಜೆಕಾರು ಎಸ್‌ಐ ಪ್ರವೀಣ ಕುಮಾರ್‌ ಅವರು ಮಾ. 9ರ ಮುಂಜಾನೆ 3:40ರ ವೇಳೆಗೆ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಹರೀಶ್‌ ಸಿರಿಬೈಲು ಎಂಬವರಿಗೆ ಸೇರಿದ ಟಿಪ್ಪರ್‌ (KL-57 C-5491)ನಲ್ಲಿ ಮರಳು ಸಾಗಾಟವಾಗುತ್ತಿತ್ತು. ಟಿಪ್ಪರ್ ನಿಲ್ಲಿಸಲು ಪೊಲೀಸರು ಮುಂದಾದಾಗ ಚಾಲಕನು ಟಿಪ್ಪರ್‌ ನಿಲ್ಲಿಸಿ ಸ್ಥಳದಿಂದ ಓಡಲು ಯತ್ನಿಸಿದ್ದನು. ಟಿಪ್ಪರ್‌ನಲ್ಲಿ‌ 5 ಸಾವಿರ ರೂ. ಮೌಲ್ಯದ ಮರಳು ತುಂಬಿತ್ತು. ಟಿಪ್ಪರ್‌ ಚಾಲಕನ ಸಹಿತ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ.

ಪರವಾನಿಗೆ ರಹಿತವಾಗಿ ಮರಳು ದಾಸ್ತಾನು ಪತ್ತೆ
ಮತ್ತೊಂದು ಪ್ರಕರಣದಲ್ಲಿ ಕುಕ್ಕುಜೆ ಗ್ರಾಮದ ಬೈಂತ್ಲ ನಿತ್ಯಾನಂದ ಅವರ ನಿರ್ಮಾಣ ಹಂತದ ಕಟ್ಟಡದ ಬಳಿ 5 ಯೂನಿಟ್‌ ಮರಳು ಪರವಾನಿಗೆ ರಹಿತವಾಗಿ ದಾಸ್ತಾನು ಮಾಡಿದ್ದು ಮಾ. 9ರಂದು ಅಜೆಕಾರು ಠಾಣೆ ಪೊಲೀಸರು ಮರಳು ಸ್ವಾಧೀನಪಡಿಸಿಕೊಂಡಿದ್ದಾರೆ. ಎಸ್‌ಐ ಪ್ರವೀಣ ಕುಮಾರ್‌ ಅವರು ದಾಳಿ ಮಾಡಿದಾಗ 10 ಸಾವಿರ ರೂ. ಮೌಲ್ಯದ ಮರಳು ಪತ್ತೆಯಾಗಿದ್ದು, ಇದನ್ನು ಪದ್ಮನಾಭ ಮತ್ತು ಅಮಿತ್‌ ಎಂಬವರು ಟಿಪ್ಪರ್‌ ನಲ್ಲಿ ಸರಬರಾಜು ಮಾಡಿರುವುದಾಗಿ ನಿತ್ಯಾನಂದ ತಿಳಿಸಿರುತ್ತಾರೆ.



































































































error: Content is protected !!
Scroll to Top