ಮಾ. 2 : ಕಾರ್ಕಳದಲ್ಲಿ ಉಚಿತ ಶ್ರವಣ ತಪಾಸಣೆ – ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ

ಮೊದಲು ನೋಂದಾವಣೆ ಮಾಡುವ 30 ಜನರಿಗೆ ಪ್ರಥಮ ಆದ್ಯತೆ

ಕಾರ್ಕಳ : ಕಾರ್ಕಳ ತಾಲೂಕಿನ ಬಂಡಿಮಠ ಫೌಂಡೇಶನ್‌, ಕಾರ್ಯನಿರತ ಪತ್ರಕರ್ತರ ಸಂಘ ನೇತೃತ್ವದಲ್ಲಿ, ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆಯನ್ನು ಮಾ. 2 ರಂದು ಬೆಳಿಗ್ಗೆ 9.30ರಿಂದ ಸಂಜೆ 3.30ರವರೆಗೆ ವಿಜೇತ ವಿಶೇಷ ಶಾಲೆಯಲ್ಲಿ ಆಯೋಜಿಸಲಾಗಿದೆ.

ಈಶ್ವರ್ ಮಲ್ಪೆಯವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು ಈಗ ಕಾರ್ಕಳದಲ್ಲಿ ವಿಘ್ನಹರ್ತ ಶ್ರವಣ ಚಿಕಿತ್ಸಾಲಯ ಸಹಯೋಗದೊಂದಿಗೆ ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು, ಈ ಸಂಸ್ಥೆಯಿಂದ ಶ್ರವಣದ ಯಂತ್ರಕ್ಕೆ ಆಗುವ ವೆಚ್ಚದ ಶೇಕಡಾ 50% ಮೊತ್ತವನ್ನು ಸಂಸ್ಥೆಯು ಭರಿಸಲಾಗುತ್ತಿದ್ದು, ಅಗತ್ಯವಿರುವವರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಈ ಮೂಲಕ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶ್ರವಣ ತಪಾಸಣೆ ಸದುಪಯೋಗ ಪಡೆಯುವ ರೋಗಿಗಳು ನೋಂದಣಿ ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಮಕ್ಕಳಿಗೆ ಮತ್ತು ಹಿರಿಯರಿಗೆ ಮೊದಲ ಆದ್ಯತೆ, ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿ ಇದ್ದರೆ ಜೊತೆಯಲ್ಲಿ ತರಬೇಕು. ಮೊದಲು ನೋಂದಾಯಿಸುವ 30 ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ವಿವರಗಳಿಗೆ 9902344399, 9900908021, 9845846213 ಕರೆ ಮಾಡಬಹುದಾಗಿದೆ.



















































































error: Content is protected !!
Scroll to Top