ಕಾರ್ಕಳ : ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹರ್ನಿಯ ತಪಾಸಣೆ ಉಚಿತ ಶಿಬಿರ

ರಿಯಾಯಿತಿ ದರದಲ್ಲಿ ಪರೀಕ್ಷೆಗಳು, ಶಸ್ತ್ರಚಿಕಿತ್ಸೆ

ಕಾರ್ಕಳ : ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಫೆ. 21ರಂದು ಹರ್ನಿಯ ತಪಾಸಣೆ ಉಚಿತ ಶಿಬಿರ ಆಯೋಜಿಸಲಾಗಿದೆ. ಶಿಬಿರ ಬೆಳಗ್ಗೆ 9.30ರಿಂದ ಸಂಜೆ ಗಂಟೆ 5ರವರೆಗೆ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಒಪಿಡಿಯಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ್‌ ತಿಳಿಸಿದ್ದಾರೆ.
ತಜ್ಞರ ಸಮಾಲೋಚನೆ ಉಚಿತವಾಗಿದ್ದು, ಹೊರರೋಗಿ ಪರೀಕ್ಷೆಗಳು ಮತ್ತು ಹರ್ನಿಯ ಶಸ್ತ್ರಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು.
ಹೊಟ್ಟೆನೋವು, ಹೊಟ್ಟೆಯ ಭಾಗದಲ್ಲಿ ಉಬ್ಬುವಿಕೆ, ಹರ್ನಿಯ ಇತಿಹಾಸ ಉಳ್ಳವರು ಮತ್ತು ಹರ್ನಿಯ ಚಿಕಿತ್ಸೆ ಆಯ್ಕೆಗಳ ಕುರಿತು ತಜ್ಞರ ಸಲಹೆ ಬಯಸುವವರು ಶಿಬಿರದಲ್ಲಿ ಭಾಗವಹಿಸಬಹುದೆಂದು ಖ್ಯಾತ ಶಸ್ತ್ರ ಚಿಕಿತ್ಸಕ ಡಾ.ಮೃಣಾಲ್ ಕುಮಾರ್ ತಿಳಿಸಿದ್ದಾರೆ.
ಮೊದಲು ನೋಂದಾಯಿಸಿದ 50 ಜನರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ದೂರವಾಣಿ ಸಂಖ್ಯೆ: 9731601150 ಅಥವಾ 08258 230583. ಸಂಪರ್ಕಿಸಲು ಕೋರಲಾಗಿದೆ.









































































































error: Content is protected !!
Scroll to Top