ಸೂರ್ಯ ಸ್ನಾನದ ಮಹತ್ವ

ಸೂರ್ಯನ ಶಕ್ತಿಯು ಅಪಾರ. ಪ್ರಾಚೀನ ಕಾಲದಿಂದಲೂ ನಾವು ಸೂರ್ಯದೇವರನ್ನು ಆರಾಧಿಸುತ್ತೇವೆ. ಮುಂಜಾನೆ ಎದ್ದ ತಕ್ಷಣ ಸೂರ್ಯ ನಮಸ್ಕಾರ ಮಾಡುವ ಪದ್ಧತಿ ಹಿಂದಿನ ಕಾಲದಿಂದಲೂ ಬೆಳೆದುಬಂದಿದೆ. ಇದರ ಮುಖ್ಯ ಉದ್ದೇಶ ಸೂರ್ಯನಿಂದ ಬರುವಂತಹ ಶಕ್ತಿ ನಮ್ಮ ದೇಹದೊಳಗೆ ಸೇರಿಸುವುದಾಗಿದೆ. ಸೂರ್ಯನ ಕಿರಣಗಳು ನಮಗೆ ಟಾನಿಕ್ ಇದ್ದಂತೆ. ಸೂರ್ಯ ಸ್ನಾನದ (sun bath) ಬಗ್ಗೆ ತಿಳಿದುಕೊಳ್ಳೋಣ .

ಚಳಿಗಾಲದಲ್ಲಿ ಸೂರ್ಯಸ್ನಾನ ಅಧಿಕ ಸಮಯ ಅಂದರೆ ನಲವತ್ತು ನಿಮಿಷಗಳ ಕಾಲ ಮಾಡಬಹುದು . ಬೇಸಿಗೆಯಲ್ಲಿ ಅಧಿಕ ಸಮಯ ಸೂರ್ಯನ ಕಿರಣ ನಮ್ಮ ದೇಹಕ್ಕೆ ಒಳ್ಳೆಯದಲ್ಲ ಆದರೆ ಇಪ್ಪತ್ತರಿಂದ ಮೂವತ್ತು ನಿಮಿಷಗಳ ಕಾಲ ಕಡ್ಡಾಯವಾಗಿ ಮಾಡಬೇಕು. ಮಳೆಗಾಲದಲ್ಲೇ ಮೂವತ್ತರಿಂದ ನಲವತ್ತು ನಿಮಿಷಗಳ ಕಾಲ ಸೂರ್ಯಸ್ನಾನ ಮಾಡಬಹುದು. ಈ ಸಮಯದಲ್ಲಿ ನಡಿಗೆ ,ವ್ಯಾಯಾಮ ಸೂರ್ಯ ನಮಸ್ಕಾರ, ಪ್ರಾಣಾಯಾಮವನ್ನು ಮಾಡಬಹುದು. ಮೊದಲಿಗೆ ಐದರಿಂದ ಹತ್ತು ನಿಮಿಷಗಳ ಕಾಲ ಪ್ರಾರಂಭಿಸಿ ಕ್ರಮೇಣ ಮೂವತ್ತು ನಿಮಿಷದ ವರೆಗೆ ಋತುವಿಗೆ ತಕ್ಕಂತೆ ಹೆಚ್ಚಿಸಬಹುದು.

ಸೂರ್ಯ ಸ್ನಾನ ಮಾಡಲು ಮುಂಜಾನೆ ಸೂರ್ಯೋದಯದ ಸಮಯ ಉತ್ತಮವಾದ ಕಾಲ. ಬೆಳಿಗ್ಗೆ ಏಂಟು ಗಂಟೆಯ ಒಳಗೆ ಹಾಗೂ ಸಂಜೆ ನಾಲ್ಕು ಗಂಟೆಯ ನಂತರ ಹಿತಕಾರಿ.
ಕಫ ಪ್ರಕೃತಿಯ ವ್ಯಕ್ತಿಗೆ ಬೊಜ್ಜು, ತಲೆನೋವು, ಸೈನಸೈಟಿಸ್ ಇರುವವರಿಗೆ ಸೂರ್ಯಸ್ನಾನ ಒಳ್ಳೆಯದು. ಪಿತ್ತ ಪ್ರಕೃತಿಯ ವ್ಯಕ್ತಿಯು ಅಧಿಕ ಸಮಯ ಬಿಸಿಲಿಗೆ ಮೈಯೊಡ್ಡಬಾರದು. ಆದರೆ ಮುಂಜಾನೆ ಇಪ್ಪತ್ತರಿಂದ ಮೂವತ್ತು ನಿಮಿಷಗಳ ಕಾಲ ಸೂರ್ಯಕಿರಣ ಒಳ್ಳೆಯದು. ವಾತಪ್ರಕೃತಿಯ ವ್ಯಕ್ತಿಗೆ ಆತಾಪ ಸೇವನೆ ಮಾಡುವುದರಿಂದ ವಾತ ದೋಷವು ಸಮತೋಲನದಲ್ಲಿರುತ್ತದೆ.

ಸೂರ್ಯ ಸ್ನಾನದಿಂದ ಉಪಯೋಗಗಳು .

  1. ನಮ್ಮ ಎಲುಬುಗಳನ್ನು ಸದೃಢಗೊಳಿಸುತ್ತದೆ. ತೊಂಭತ್ತು ಪ್ರತಿಶತ ವಿಟಮಿನ್ ಡಿ ನಮಗೆ ಸೂರ್ಯನಿಂದ ದೊರೆಯುವುದು. ನಮ್ಮ ದೇಹಕ್ಕೆ ವಿಟಮಿನ್ ಡಿ ಸಿಗದಿದ್ದರೆ ಎಲುಬುಗಳು ದುರ್ಬಲಗೊಳ್ಳುತ್ತದೆ. ವಿಟಮಿನ್ ಡಿ ಯು ಡಯಾಬಿಟಿಸ್ ಹಾಗೂ ಬಿಪಿಯನ್ನು ನಿಯಂತ್ರಿಸುತ್ತದೆ.
  2. ಇಮ್ಯೂನಿಟಿಯನ್ನು ಹೆಚ್ಚಿಸುತ್ತದೆ.
  3. ಹೃದಯಕ್ಕೆ ಹಿತಕಾರಿ
  4. ಋಣಾತ್ಮಕ ಚಿಂತನೆಯಿಂದ ದೂರಮಾಡಿ ಖುಷಿಯನ್ನು ಕೊಡುತ್ತದೆ.
  5. ತ್ವಚೆಗೆ ಒಳ್ಳೆಯದು. ಮೊಡವೆ, ಸೋರಿಯಾಸಿಸ್ ಎಕ್ಸೀಮಾ, ಇರುವವರಿಗೆ ಪ್ರಯೋಜನಕಾರಿ.
  6. ಹಾರ್ಮೋನ್‌ಗಳನ್ನು ಸಮತೋಲನದಲ್ಲಿರಿಸುತ್ತದೆ.
    7.ನಒಳ್ಳೆಯ ನಿದ್ದೆಯನ್ನು ಪ್ರೇರೇಪಿಸುತ್ತದೆ.
  7. ರಕ್ತ ಚಲನೆಯನ್ನು ಸುಗಮಗೊಳಿಸುತ್ತದೆ. ಅಥೆರೋಸ್ಕ್ಲೆರೋಸಿಸ್ ಇರುವವರಿಗೆ ಪ್ರಯೋಜನಕಾರಿ.
  8. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಬೆವರಿನ ಮೂಲಕ ಹೊರಹಾಕುತ್ತದೆ.
    ತ್ವಚೆಯ ಮೇಲೆ ಸನ್ ಬರ್ನ್, ತುರಿಕೆ, ನೋವು ಇದ್ದರೆ ಸೂರ್ಯಸ್ನಾನ ನಿಷಿದ್ಧ. ಬೆಳಿಗ್ಗೆ 9ರಿಂದ 4ಗಂಟೆಯವರೆಗೆ ಸೂರ್ಯಕಿರಣಗಳು ಅಧಿಕ ಉಷ್ಣ ಹಾಗೂ ತೀಕ್ಷ್ಣ ಹಾಗೂ ಪ್ರಕರವಾಗಿರುವುದರಿಂದ ಆ ಸಮಯದಲ್ಲಿ ಹೊರಗೆ ಹೋಗದೇ ಇರೋದು ಒಳ್ಳೆಯದು. ಅನಿವಾರ್ಯವಿದ್ದಲ್ಲಿ ಛತ್ರಿಯನ್ನು ಉಪಯೋಗಿಸಿರಿ.






error: Content is protected !!
Scroll to Top