ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ : 5 ಮಂದಿ ವಿರುದ್ಧ ಕೇಸ್‌

ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಶಾಂತಿಭಂಗ ಮಾಡಿದ ಆರೋಪದಲ್ಲಿ ಐವರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಜ.10ರಂದು ಮಧ್ಯಾಹ್ನ ಹೆಬ್ರಿ ಗ್ರಾಮದ ಹೆಬ್ರಿ-ಕಾರ್ಕಳ ರಸ್ತೆಯ ಶಾರದಾ ಜನರಲ್‌ ಸ್ಟೋರ್‌ ಬಳಿ 4-5 ಜನ ಬೊಬ್ಬೆ ಹಾಕುತ್ತಾ ಹೊಡೆದಾಡಿಕೊಳ್ಳುತ್ತಿದ್ದರು. ಈ ಪೈಕಿ ಹೆಬ್ರಿ ಪೊಲೀಸರು ಶಂಭು, ಧ್ರುವರಾಜ್‌, ಅರುಣ್‌ ಕುಮಾರ್‌, ಅಭಿಷೇಕ್ ಮತ್ತು ರಾಹುಲ್‌ ಎಂಬವರವರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ.































































error: Content is protected !!
Scroll to Top