ಲಲಿತಾ ಸಹಸ್ರನಾಮ ಹೋಮ, ಧಾರ್ಮಿಕ ಸಭೆ, ಸನ್ಮಾನ
ಪಡುಕುತ್ಯಾರು: ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಜ.6ರಿಂದ ನಡೆಯುತ್ತಿರುವ ಕೋಟಿ ಕುಂಕುಮಾರ್ಚನೆ ಜ.12ರಂದು ಸಮಾಪ್ತಿಗೊಳ್ಳಲಿದೆ. ಶ್ರೀ ಸರಸ್ವತೀ ಮಾತೃಮಂಡಳಿ, ಆನೆಗುಂದಿ ಪ್ರತಿಷ್ಠಾನದ ವ್ಯಾಪ್ತಿಯ ದೇವಸ್ಥಾನಗಳು ಹಾಗೂ ಸ್ಥಳೀಯ ಪಂಚಾಯತುಗಳ ಹಿಂದೂ ಸಮಾಜ ಬಾಂಧವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಮಹಾಸಂಸ್ಥಾನದ ವಿವಿಧ ಯೋಜನೆಗಳ ಸಾಕಾರ ಮತ್ತು ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಕೇಪಳ ಪುಷ್ಪದೊಂದಿಗೆ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಕೋಟಿ ಕುಂಕುಮಾರ್ಚನೆಯು ಮಹಾಸಂಸ್ಥಾನದ ಶ್ರೀ ಸರಸ್ವತಿ ಪೂರ್ವಚಾತ್ರ ಸಂಘ, ಶ್ರೀ ನಾಗದರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ಹಾಗೂ ಸಮಾಜ ವೈದಿಕರು ಕಾರ್ಯಕ್ರಮಗಳ ವೈದಿಕ ನೇತೃತ್ವದಲ್ಲಿ ನಡೆಯುತ್ತಿದೆ.

ಜ.12ರಂದು ಬೆಳಗ್ಗೆ 5.30ರಿಂದ ದಶ ಸಹಸ್ರ ಕದಳಿ ಶ್ರೀ ಲಲಿತಾ ಸಹಸ್ರನಾಮ ಹೋಮಗಳು, ಶ್ರೀ ಸೂಕ್ತ ಹೋಮ ನಡೆಯಲಿದೆ. ಕೋಟಿ ಕುಂಕುಮಾರ್ಚನೆಯ ಕೊನೆಯ ಎರಡು ಆವೃತ್ತಿ ಬೆಳಗ್ಗೆ 8.30ರಿಂದ 10ರವರೆಗೆ ನಡೆಯಲಿದೆ. ನಂತರ ಕೇಪಳ ಪುಷ್ಪದೊಂದಿಗೆ ಕೋಟಿ ಕುಂಕುಮಾರ್ಚನೆಯ ಸಮರ್ಪಣೆ ನಡೆಯಲಿದೆ.
ಧಾರ್ಮಿಕ ಸಭೆ

ಶ್ರೀ ಸರಸ್ವತಿ ಮಾತ್ರ ಮಂಡಳಿಯ ವತಿಯಿಂದ ಶ್ರೀ ಗುರುಭಕ್ತಿ ಕುಸುಮಾಂಜಲಿ ಎನ್ನುವ ಸ್ತೋತ್ರ ಪುಸ್ತಕ ಬಿಡುಗಡೆ, ಶ್ರೀ ಯತೀಶ್ ಬಿ ಆಚಾರ್ಯ ಕೊಯಂಬುತ್ತೂರು ತಯಾರಿಸಿದ ಮಹಾಸಂಸ್ಥಾನದ ಸೇವಾರಶೀದಿಗಳ app ಬಿಡುಗಡೆಯಾಗಲಿದೆ.
ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಪರಮಪೂಜ್ಯ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಲಿರುವರು. ಅಧ್ಯಕ್ಷತೆಯನ್ನು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಕಟಪಾಡಿ ಇದರ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸುವರು. ಶ್ರೀ ಸರಸ್ವತೀ ಮಾತೃ ಮಂಡಳಿ ಪಡುಕುತ್ಯಾರು ಇದರ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ ಪ್ರಾಸ್ತಾವಿಕ ಮಾತುಗಳನ್ನಾಡಲಿರುವರು.

ಆನೆಗುಂದಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ವಿದ್ವಾನ್ ಮಹಾಮಹೋಪಾಧ್ಯಾಯ ಪಂಜ ಭಾಸ್ಕರ ಭಟ್, ವೇದಬ್ರಹ್ಮ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ, ಶ್ರೀ ಸರಸ್ವತೀ ಮಾತೃ ಮಂಡಳಿಯ ಗೌರವ ಅಧ್ಯಕ್ಷೆ ಮಾತೋಶ್ರೀ ಸರಳಮ್ಮ ಗುರುನಾಥ ಸ್ವಾಮಿ ಶಿಕಾರಿಪುರ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ ಬಾಯಾರು ಧಾರ್ಮಿಕ ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಯಶಪಾಲ್ ಸುವರ್ಣ, ವಿಶೇಷ ಆಹ್ವಾನಿತರಾಗಿ ಮುನಿಯಾಲು ಸಂಜೀವಿನಿ ಗೋಧಾಮದ ಸವಿತಾ ಆರ್ ಆಚಾರ್ಯ, ವೀಣಾ ವಿಶ್ವನಾಥ ರಾವ್ ದೋಹಾ ಕತಾರ್ ಭಾಗವಹಿಸುವರು.

ರಾಜ್ಯ ಸರಕಾರದ ಸಹಕಾರ ರತ್ನ ಪ್ರಶಸ್ತಿ ಪುರಸ್ಕ್ಕೃತ ವಿಶ್ವಕರ್ಮ ಸಹಕಾರ ಬ್ಯಾಂಕ್ ಮಂಗಳೂರು ಅಧ್ಯಕ್ಷ ಡಾ. ಎಸ್.ಆರ್ ಹರೀಶ್ ಆಚಾರ್ಯ ಜಳಕದಕಟ್ಟೆ ಇವರಿಗೆ ಮಹಾಸಂಸ್ಥಾನದ ವತಿಯಿಂದ ಅಭಿನಂದನೆ ನಡೆಯಲಿದೆ. ಎಸ್ ಕೆ ಜಿ ಐ ಕೋ ಆಪ್ ಸೊಸೈಟಿ ಮಂಗಳೂರು ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಪೆರ್ಡೂರು , ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ ಕಳತ್ತೂರು, ಪ್ರಸಾದ್ ಶೆಟ್ಟಿ ಕುತ್ಯಾರು, ಗೀತಾಂಜಲಿ ಸುವರ್ಣ, ಶ್ರೀಮತಿ ಶಿಲ್ಪಾ ಜಿ.ಸುವರ್ಣ ಶುಭಾಶಂಸನೆಗೈಯ್ಯುವರು.































