ಹೆಬ್ರಿ : ಬೈಕ್‌ಗೆ ಪಿಕಪ್ ವಾಹನ ಡಿಕ್ಕಿಯಾದ ಪರಿಣಾಮವಾಗಿ ಗಾಯಗೊಂಡ ಸವಾರ ಆಸ್ಪತ್ರೆ ದಾಖಲಾದ ಘಟನೆ ಜ. 7ರಂದು ವರಂಗ ಗ್ರಾಮದಲ್ಲಿ ಸಂಭವಿಸಿದೆ.
ಸುನಿಲ್ ಎಂಬವರು ಸಂಜೆ 7.45ಕ್ಕೆ ಅಜೆಕಾರು ಕಡೆಯಿಂದ ಹೆಬ್ರಿ ಕಡೆಗೆ ತಮ್ಮ ಬೈಕ್‌ನಲ್ಲಿ ಸಾಗುತ್ತಿದ್ದಾಗ ಹೆಬ್ರಿ ಕಡೆಯಿಂದ ಶರೀಪ್ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಪಿಕಪ್ ವಾಹನ ಡಿಕ್ಕಿಯಾಗಿದೆ. ಪರಿಣಾಮವಾಗಿ ಬೈಕ್ ಸಮೇತ ಸುನಿಲ್ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಅಲ್ಲೇ ಇದ್ದ ಸುನಿಲ್ ಸ್ನೇಹಿತ ಗುರು ಪ್ರಸಾದ್ ಸುನಿಲ್‌ನನ್ನು ಚಿಕಿತ್ಸೆಗಾಗಿ ಹೆಬ್ರಿ ಸಮಯದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ಬಗ್ಗೆ ಗುರುಪ್ರಸಾದ್ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬೈಕ್‌ಗೆ ಪಿಕಪ್ ಡಿಕ್ಕಿ – ಸವಾರ ಆಸ್ಪತ್ರೆ ದಾಖಲು















