ಬೆಂಗಳೂರು: ಆಧುನಿಕ ಬೆಳವಣಿಗೆಗಳು, ಮಧ್ಯಪ್ರಾಚ್ಯದ ಸಂಘರ್ಷದ ಎಫೆಕ್ಟ್‌ನಿಂದ ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗ್ತಿದೆ. ಮುಟ್ಟಿದ ವಸ್ತುಗಳೆಲ್ಲ ಕೈ ಸುಡಲಿದ್ದು ಹೋಟೆಲ್ ಗ್ರಾಹಕರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟುವ ಭೀತಿ ಶುರುವಾಗಿದೆ.
ಕಮರ್ಶಿಯಲ್ ಗ್ಯಾಸ್ ಸಿಲಿಂಡರ್, ತರಕಾರಿ, ದಿನಸಿ ಬೆಲೆ ಗಣನೀಯವಾಗಿ ಏರಿಕೆ ಕಂಡಿದ್ದು, ಹೋಟೆಲ್‌ಗಳಲ್ಲಿ ಊಟ- ತಿಂಡಿ ಬೆಲೆ ಏರಿಸಲು ಚಿಂತನೆ ನಡೆಸಲಾಗ್ತಿದೆ.
ಸಕ್ಕರೆ, ಈರುಳ್ಳಿ, ಅಕ್ಕಿ ಸೇರಿದಂತೆ ವಿವಿಧ ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ಶೇ.30 ರಿಂದ 50ರಷ್ಟು ಹೆಚ್ಚಳ ಆಗಿದೆ. ಇದರಿಂದ ಹೋಟೆಲ್‌ಗಳನ್ನ ನಡೆಸೋದಕ್ಕೂ ಕಷ್ಟ ಆಗ್ತಿದ್ದು, ದರ ಏರಿಕೆ ಅನಿವಾರ್ಯ ಅನ್ನೋ ನಿರ್ಧಾರಕ್ಕೆ ಹೋಟೆಲ್ ಮಾಲೀಕರು ಬಂದಿದ್ದಾರೆ.
ಇನ್ನೊಂದು ವಾರ ದರ ಇಳಿಕೆಯಾಗದಿದ್ರೆ ಹೋಟೆಲ್‌ಗಳಲ್ಲಿ ಟೀ, ಕಾಫಿ ಜೊತೆಗೆ ಇತರೆ ಪದಾರ್ಥಗಳ ಬೆಲೆಯೂ ಏರಿಕೆಯಾಗಲಿದೆ. ಗ್ಯಾಸ್ ಸಿಲಿಂಡರ್ ಅಭಾವ ಹಾಗೂ ಆರ್ಥಿಕ ನಷ್ಟದಿಂದ ಚೇತರಿಸಿಕೊಂಡಿದ್ದ ಹೋಟೆಲ್‌ಗಳಿಗೆ ಇದೀಗ ದರ ಏರಿಕೆಯ ಹೊರೆಬಿದ್ದಿದೆ. ಈ ಹೊರೆ ಅನಿವಾರ್ಯವಾಗಿ ಗ್ರಾಹಕರಿಗೆ ತಟ್ಟಲಿದೆ.
























