ಕಾರ್ಕಳ : ಬಾವಿಗೆ ಬಿದ್ದ ಚಿರತೆಯೊಂದನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ ಘಟನೆ ನ. 10 ರಂದು ಬೆಳ್ಮಣ್ ನಲ್ಲಿ ಸಂಭವಿಸಿದೆ. ಪರಾಡಿ ದರ್ಖಾಸು ಫಿಲೋಮಿನಾ ಎಂಬವರ ಮನೆಯ ಬಾವಿಗೆ ಚಿರತೆ ಬಿದ್ದಿದ್ದು ಅರಣ್ಯ ಇಲಾಖೆಯವರು ಸುರಕ್ಷಿತವಾಗಿ ಚಿರತೆಯನ್ನು ಮೇಲೆಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಡಿವೈಆರ್ ಎಫ್ಓ ಹುಕ್ರಪ್ಪ, ಸಿಬ್ಬಂದಿ ಪ್ರಕಾಶ್, ಸುರೇಶ್ ಮತ್ತವರ ತಂಡ ಪಾಲ್ಗೊಂಡಿದ್ದರು.
ಬೆಳ್ಮಣ್ – ಬಾವಿಗೆ ಬಿದ್ದ ಚಿರತೆಯ ರಕ್ಷಣೆ
























