ಟರ್ಫ್ ಕ್ಲಬ್ ಮೆಂಬರ್‌ಶಿಪ್‌ ಕೊಡಿಸಲು ಲಂಚ ಪಡೆದ ಸಿದ್ದರಾಮಯ್ಯ : ಶೋಭಾ ಕರಂದ್ಲಾಜೆ ಆರೋಪ

ಬೆಂಗಳೂರು: ನಗರದ ಟರ್ಫ್ ಕ್ಲಬ್ ಮೆಂಬರ್‌ಶಿಪ್‌ ಕೊಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಲಂಚ ಪಡೆದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟರ್ಫ್ ಕ್ಲಬ್‌ನಲ್ಲಿ ವಿವೇಕಾನಂದ ಎನ್ನುವವರಿಗೆ ಸದಸ್ಯತ್ವ (ಸ್ಟುವರ್ಟ್) ಕೊಡಿಸೋಕೆ 1.30 ಕೋಟಿ ರೂ. ಹಣ ಸಿದ್ದರಾಮಯ್ಯ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಚೆಕ್‌ನಲ್ಲಿ ಈ ಹಣ ಪಡೆದಿದ್ದಾರೆ. ಈ‌ ಸಂಬಂಧ ಪೊಲೀಸರು ಬಿ ರಿಪೋರ್ಟ್ ಹಾಕಿದ್ರು. ಇದಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಕೋರ್ಟ್ ಹೇಳಿದೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅಪರಾಧಿ. ಚೆಕ್‌ನಲ್ಲಿ ಹಣ ಪಡೆದಿರುವರು ಸಿದ್ದರಾಮಯ್ಯ. ಇಂತಹವರು ಬೇರೆಯವರ ಬಗ್ಗೆ ಮಾತಾಡ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.











































































error: Content is protected !!
Scroll to Top