ಕೌನ್ ಬನೇಗಾ ಕರೋಡ್ಪತಿ ಸೀಸನ್ 16ರಲ್ಲಿ ಪ್ರಿಯಾಂಕ ಪೊರ್ವಾಲ್

ಕಾರ್ಕಳ : ಸೋನಿ ಎಂಟರ್ಟೈನ್ಮೆಂಟ್ ಟಿವಿ ಮಾಧ್ಯಮದವರು ನಡೆಸಿಕೊಂಡು ಬರುತ್ತಿರುವ ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಬಚ್ಚನ್ ನಿರೂಪಣೆಯ ಜನ ಮೆಚ್ಚುಗೆಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿಯ 16ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಸಾಪ್ (SAP) ಇಂಡಿಯಾ ಕಂಪನಿಯ ಚೀಪ್ ಆರ್ಕಿಟೆಕ್ಟ್, ಕನ್ನಡತಿ, ಬೆಂಗಳೂರಿನ ಪ್ರಿಯಾಂಕ ಪೊರ್ವಾಲ್ ಭಾಗಿಯಾಗಿದ್ದರು. ಇವರು ಏಜೆಂಟ್ ಟೆಕ್ ಟೆಕ್ನಾಲಜಿಯ ಮ್ಯಾನೇಜಿಂಗ್ ಡೈರೆಕ್ಟರ್, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಡಾ. ರವೀಂದ್ರ ಶೆಟ್ಟಿಯವರ ಪತ್ನಿ. ರಾಜಸ್ಥಾನದ ಉದಯ್ಪುರ್ ಜಿಲ್ಲೆಯ ಜೈನ ಮನೆತನದ ಪರಮೇಶ್ವರ ಪೊರ್ವಾಲ್ ಮತ್ತು ರಾಜಕುಮಾರಿ ಪೊರ್ವಾಲ್ ದಂಪತಿಯ ಪುತ್ರಿ.

ಪ್ರಿಯಾಂಕ ಅವರು ಕ್ವಿಜ್, ವಿಜ್ಞಾನ, ಸಾಹಿತ್ಯ, ಚರಿತ್ರೆ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರಾಗಿದ್ದು, ಏಷ್ಯಾ ವುಮ್ಯಾಂಟಿಕ್ ಲೀಡರ್ ಅವಾರ್ಡ್ 2024, ವುಮೆನ್ ಟೆಕ್ ಗ್ಲೋಬಲ್ ಅವಾರ್ಡ್ 2022 ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಕೌನ್ ಬನೇಗ ಕರೋಡ್ಪತಿಯಲ್ಲಿ ಅಮಿತಾಬ್‌ ಬಚ್ಚನ್ ಕೇಳಿರುವ ಪ್ರಶ್ನೆಗಳಿಗೆ ಮಿಂಚಿನ ರೂಪದಲ್ಲಿ ಉತ್ತರಿಸುತ್ತಾ 80 ಸಾವಿರ ರೂ. ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.





















































error: Content is protected !!
Scroll to Top