ರಂಗನಪಲ್ಕೆ – 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಕಾರ್ಕಳ : ರಂಗನಪಲ್ಕೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 28ನೇ ವರ್ಷದ ಗಣೇಶೋತ್ಸವ ಸೆ. 7ರಂದು ರಂಗನಪಲ್ಕೆಯ ಎಲಿಯಾಳ ಶಾಲಾ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆಯಾಗಿ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 1.30ರಿಂದ ಶಾಲಾ ಮಕ್ಕಳಿಂದ ನೃತ್ಯ ವೈಭವ, 2 ಗಂಟೆಯಿಂದ ವಿಠಲ್‌ ನಾಯಕ್‌ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ಸಂಜೆ 4 ಗಂಟೆಯಿಂದ ಮಡಕೆ ಒಡೆಯುವ ಸ್ಪರ್ಧೆ, 5 ಗಂಟೆಗೆ ವಿಸರ್ಜನಾ ಪೂಜೆಯಾಗಿ 6 ಗಂಟೆಗೆ ಮೆರವಣಿಗೆ ಮೂಲಕ ಶ್ರೀ ದೇವರ ಮೂರ್ತಿಯನ್ನು ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನವಾಗಲಿದೆ. ಮೆರವಣಿಗೆಯಲ್ಲಿ ಭಜನಾ ಕುಣಿತ, ಹುಲಿವೇಷ, ಶ್ರೀ ಸಾಯಿ ಸಿಂಗಾರಿ ಮೇಳಂ ಕೊಡಂಕುರು ಇವರಿಂದ ಕೇರಳ ಚೆಂಡೆ, ನಾಗಸ್ವರ ವಾದನ ಇರಲಿದೆ ಎಂದು ಸಮಿತಿಯ ಅಧ್ಯಕ್ಷ ವಿಜಯ್‌ ಶೆಟ್ಟಿ ಕೌಡೂರು, ಉಪಾಧ್ಯಕ್ಷ ಪ್ರಕಾಶ್‌ ಸಫಲಿಗ, ಕಾರ್ಯದರ್ಶಿ ದೇವೇಂದ್ರ ನಾಯ್ಕ ಹಾಗೂ ಕೋಶಾಧಿಕಾರಿ ಸುಧಾಕರ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





















































error: Content is protected !!
Scroll to Top