ಮಂಕಿ ಫಾಕ್ಸ್

ಗಂಭೀರವಾದ ಮಂಕಿ ಪಾಕ್ಸ್ ಅಥವಾ ಮಂಗನ ಕಾಯಿಲೆಯ ಬಗ್ಗೆ ತಿಳಿದುಕೊಳ್ಳೋಣ.
ಏನಿದು ಮಂಕಿ ಪಾಕ್ಸ್ ?
ಎಂ ಪಾಕ್ಸ್ ಅಥವಾ ಮಂಕಿ ಪಾಕ್ಸ್ ವೈರಸ್ ನಿಂದ ಉಂಟಾಗುವ ಸೋಂಕು ರೋಗ.

ಲಕ್ಷಣಗಳು :
ಇದರ ಲಕ್ಷಣಗಳ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರಿಗೆ ಕಡಿಮೆ ಲಕ್ಷಣಗಳು ಹೊಂದಿದ್ದರೆ ಇನ್ನು ಕೆಲವರಿಗೆ ಗಂಭೀರ ಸಮಸ್ಯೆ ಉಂಟಾಗಿ ಸಾವು ಕೂಡ ಆಗಬಹುದು. ಸೊಂಕು ತಗಲಿದ ಎರಡರಿಂದ ನಾಲ್ಕು ವಾರದವರೆಗೆ ಚರ್ಮದ ದದ್ದುಗಳು ಕಾಣಿಸುತ್ತದೆ. ಜ್ವರ, ತಲೆನೋವು, ಬೆನ್ನು ನೋವು, ಸ್ನಾಯು ನೋವು, ನಿಶಕ್ತಿ, ದುಗ್ಧರಸ ಗ್ರಂಥಿಗಳ ಊತ ಇದರ ಲಕ್ಷಣಗಳು. ಚರ್ಮದ ದದ್ದುಗಳು ವಿಶೇಷವಾಗಿ ಮುಖ, ಅಂಗೈ, ಪಾದ, ತೊಡೆ ಸಂದು, ಜನನಾಂಗ, ಗುದ ಪ್ರದೇಶಗಳ ಮೇಲೆ ಕಾಣಬಹುದು, ಹುಣ್ಣುಗಳ ಸಂಖ್ಯೆ ಹಲವಾರು ಸಾವಿರದವರೆಗೆ ಇರಬಹುದು, ನೋವು ಹಾಗೂ ಜ್ವರದ ಔಷಧಿ ನೀಡಿದಾಗ ಕಡಿಮೆಯಾಗುತ್ತದೆ. ಆದರೆ ಕೆಲವರಿಗೆ ತೀವ್ರವಾಗಿ ಸಾವಿಗೆ ಕಾರಣವಾಗಬಹುದು. ಗರ್ಭಿಣಿಯರು, ನವಜಾತ ಶಿಶುಗಳು, ಮಕ್ಕಳು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಪಾಯ ಹೆಚ್ಚು. ರೋಗವು ತೀವ್ರರೂಪ ತಳಿದಾಗ ಹೆಚ್ಚು ವ್ಯಾಪಕವಾದ ಚರ್ಮದ ಗಾಯಗಳು ವಿಶೇಷವಾಗಿ ಬಾಯಿ, ಕಣ್ಣು ಮತ್ತು ಜನನಾಂಗಗಳಲ್ಲಿ ಕಂಡು ಬರುತ್ತದೆ. ಆಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಸೂಕ್ತ.

ರೋಗ ಪ್ರಸಾರ ಹೇಗೆ ?
ಸೋಂಕಿತ ವ್ಯಕ್ತಿ ಅಥವಾ ಪ್ರಾಣಿಗಳಿಂದ ನೇರ ಸಂಪರ್ಕದ ಮೂಲಕ.
ಉಸಿರಾಟದ ಹನಿಗಳಿಂದ.
ಸೋಂಕಿತ ವ್ಯಕ್ತಿಯ ಚರ್ಮದ ಗಾಯಗಳು ಅಥವಾ ದೈಹಿಕ ದ್ರವಗಳೊಂದಿಗೆ ನಿಕಟ ಸಂಪರ್ಕದಿಂದ.
ಕಲುಷಿತ ವಸ್ತುಗಳಿಂದ.

ತಡೆಯುವುದು ಹೇಗೆ ?
ಸೋಂಕಿತ ಪ್ರಾಣಿ ಅಥವಾ ಜನರಿಂದ ದೂರವಿರಿ.
ಕಲುಷಿತ ವಸ್ತುಗಳನ್ನು ನಿರ್ವಹಿಸುವಾಗ ಗ್ಲೌಸ್ ಹಾಗೂ ಫೇಸ್ ಮಾಸ್ಕ ಧರಿಸಿ. ನಂತರ ಸರಿಯಾಗಿ ಕೈಕಾಲುಗಳನ್ನು ಸ್ವಚ್ಛಗೊಳಿಸಿ.
ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಹಾಗೂ ಮನೆಯ ಸುತ್ತಮುತ್ತ ಸ್ವಚ್ಛವಾಗಿ ಇಡಿರಿ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ.
ಶುದ್ಧ ಬಿಸಿಯಾದ ಆಹಾರವನ್ನು ಸೇವಿಸಿ.

ಚಿಕಿತ್ಸೆ ಹೇಗೆ ?
ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ನೋವು ನಿವಾರಕ ಹಾಗೂ ಗಾಯದ ಆರೈಕೆ, ಜ್ವರಕ್ಕೆ ಮದ್ದು ನೀಡಲಾಗುವುದು.







error: Content is protected !!
Scroll to Top