ಪೊಲೀಸ್‌ ಅಧಿಕಾರಿಗೆ ಕಂಟಕವಾದ ದರ್ಶನ್‌ ಕೂಲಿಂಗ್‌ ಗ್ಲಾಸ್‌

ಬೆಂಗಳೂರು : ಕೊಲೆ ಆರೋಪಿ ದರ್ಶನ್‌ಗೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳಿಗೆ ಕಂಟಕ ತಪ್ಪುತ್ತಿಲ್ಲ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಅನುಭವಿಸಿದ ಕಾರಣಕ್ಕೆ ನಟನನ್ನು ನಿನ್ನೆ ನಸುಕಿನ ಹೊತ್ತು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ವಿಐಪಿ ಸೌಲಭ್ಯಕ್ಕೆ ಅವಕಾಶ ಮಾಡಿಕೊಟ್ಟ ಬೆಂಗಳೂರಿನ 9 ಜೈಲು ಅಧಿಕಾರಿಗಳು ಅಮಾನತಾಗಿ ಶಿಸ್ತು ಕ್ರಮ ಎದುರಿಸುತ್ತಿದ್ದಾರೆ. ಈಗ ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋದ ಪೊಲೀಸ್‌ ಅಧಿಕಾರಿಗೂ ದರ್ಶನ್‌ ಕಾರಣದಿಂದ ಕಂಟಕ ಎದುರಾಗಿದೆ.
ಬಳ್ಳಾರಿ ಜೈಲಿಗೆ ದರ್ಶನ್‌ ಹೋಗುತ್ತಿರುವ ಫೋಟೊ ಮತ್ತು ವೀಡಿಯೊಗಳು ಎಲ್ಲೆಡೆ ವೈರಲ್‌ ಆಗಿದೆ. ದರ್ಶನ್‌ ಬೆಲೆಬಾಳುವ ಟಿ-ಶರ್ಟ್‌, ಜೀನ್ಸ್‌ ಪ್ಯಾಂಟ್‌, ಶೂ ಧರಿಸಿದ್ದ. ಜೊತೆಗೆ ಕೂಲಿಂಗ್‌ ಗ್ಲಾಸ್‌ ಕೂಡ ಇತ್ತು. ಈಗ ಈ ಕೂಲಿಂಗ್‌ ಗ್ಲಾಸ್‌ನಿಂದಾಗಿ ಅಧಿಕಾರಿಗೆ ಸಮಸ್ಯೆ ಉಂಟಾಗಿದೆ.
ಬೆಂಗಳೂರಿನಿಂದ ಬಳ್ಳಾರಿಗೆ ಕರೆದುಕೊಂಡು ಹೋಗುವಾಗ ಭದ್ರತೆಯ ಉಸ್ತುವಾರಿ ಹೊಂದಿದ್ದ ಅಧಿಕಾರಿ ವಿರುದ್ಧ ಕೂಲಿಂಗ್‌ ಗ್ಲಾಸ್‌ ಧರಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಶಿಸ್ತಕ್ರಮ ಪ್ರಾರಂಭಿಸಲಾಗಿದೆ. ಪೊಲೀಸ್‌ ವಾಹನದಿಂದ ಇಳಿಯುವಾಗ ಕೂಲಿಂಗ್‌ ಗ್ಲಾಸನ್ನು ನಟ ಎದೆಭಾಗದಲ್ಲಿ ಟಿ-ಶರ್ಟ್‌ಗೆ ಸಿಕ್ಕಿಸಿಕೊಂಡಿದ್ದ. ಇದು ಫೋಟೊ ಮತ್ತು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಇದು ಕೂಲಿಂಗ್‌ ಗ್ಲಾಸ್‌ ರೀತಿ ಕಾಣಿಸುತ್ತಿರುವ ಪವರ್‌ ಗ್ಲಾಸ್‌. ಕೈದಿಗಳು ಕಣ್ಣಿನ ಸಮಸ್ಯೆ ಇದ್ದರೆ ಪವರ್‌ ಗ್ಲಾಸ್‌ ಧರಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಎಂದು ಜೈಲು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.









error: Content is protected !!
Scroll to Top