ಕಾರ್ಕಳ : ಸಾಣೂರು ಕರಿಯಕಲ್ಲು ಇಂದಿರಾನಗರ ಪುಲ್ಕೇರಿಯ ಸಾರ್ವಜನಿಕ ಶ್ರೀ ಸತ್ಯಸಾರಮಣಿ ಹಲೇರ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಆ. 19 ರಂದು ಸಾಮೂಹಿಕ ಆಶ್ಲೇಷಾ ಬಲಿ ಹಾಗೂ ನಾಗದರ್ಶನ ನಡೆಯಲಿದೆ.
ಬೆಳಿಗ್ಗೆ ಗಂಟೆ 6.05ರಿಂದ ನಾಗಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ನವಕಕಲಶ, ನಾಗದೇವರಿಗೆ ತನು ಪಂಚಾಮೃತ ಅಭಿಷೇಕ. 9.05ರಿಂದ ಸಾಮೂಹಿಕ ಆಶ್ಲೇಷಾ ಬಲಿ, ಪವಮಾನ ಸೂಕ್ತ ಹೋಮ 10.30ಕ್ಕೆ ಮಹಾಪೂಜೆ, 11.05ರಿಂದ ನಾಗಸಂದರ್ಶನ 12.05ಕ್ಕೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಆ. 19 : ಕರಿಯಕಲ್ಲು ಸಾರ್ವಜನಿಕ ಶ್ರೀ ಸತ್ಯಸಾರಮಣಿ ಹಲೇರ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರ : ಸಾಮೂಹಿಕ ಆಶ್ಲೇಷಾ ಬಲಿ-ನಾಗದರ್ಶನ



























































