ಕಾರ್ಕಳ : ಸಂಪತ್ ಎಂಬವರು ಮಂಗಳೂರಿನ ಅಡ್ಡೂರಿನಲ್ಲಿ ಸರಕಾರಿ ಹೊಳೆಯಿಂದ ರಾಶೀಕ್ ಅಡ್ಡೂರು ಕಳವು ಮಾಡಿ ನೀಡಿದ ಮರಳನ್ನು KA-02-AF-9666ನೇ ನಂಬ್ರದ ಟಿಪ್ಪರ್ ಲಾರಿಯಲ್ಲಿ ಯಾವುದೇ ಪರವಾನಿಗೆಯಿಲ್ಲದೆ ನಿಯಮ ಉಲ್ಲಂಘನೆ ಮಾಡಿ ಆ. 16ರಂದು 12:30 ಗಂಟೆಗೆ ಕುಕ್ಕುಂದೂರು ಜಯಂತಿ ನಗರ ಸರ್ವಜ್ಜ ಸರ್ಕಲ್ ಬಳಿ ಪುಲ್ಕೇರಿ ಬೈಪಾಸ್ ಕಡೆಯಿಂದ ಜೋಡು ರಸ್ತೆಯ ಕಡೆಗೆ ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮರಳು ಅಕ್ರಮ ಸಾಗಾಟ – ದೂರು ದಾಖಲು



























































