ಹೆಬ್ರಿ : ಅಕ್ರಮ ಕಲ್ಲು ಗಣಿಗಾರಿಕೆ – ಮೂವರ ವಿರುದ್ಧ ದೂರು ದಾಖಲು

ಹೆಬ್ರಿ : ಹೆಬ್ರಿ ಪೊಲೀಸ್‌ ಉಪನಿರೀಕ್ಷಕ ಮಹೇಶ ಟಿ. ಎಂ. ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಸ್ಪೋಟಕ ಬಳಸಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ನಾಲ್ಕೂರು ಗ್ರಾಮದ ಕಜ್ಕೆ ಬೈಲು ಎಂಬಲ್ಲಿಗೆ ಸಿಬ್ಬಂದಿಯೊಂದಿಗೆ ಹೋಗಿದ್ದು, ಶಿಲೆ ಕಲ್ಲಿನ ಕ್ವಾರಿಯಲ್ಲಿ ಕಲ್ಲುಗಳನ್ನು ಒಡೆಯುತ್ತಿದ್ದ ಇಬ್ಬರು ವ್ಯಕ್ತಿಗಳು ಅಲ್ಲಿಂದ ಓಡಿದ್ದು, ಅವರಲ್ಲಿ ಓರ್ವ ನಾಲ್ಕೂರು ಗ್ರಾಮದ ಕೃಷ್ಣ ಎಂದು ಗುರುತಿಸಲಾಗಿದೆ. ನಂತರ ಕಜ್ಕೆ ಮರಕೊಂಬೆಯಲ್ಲಿನ ಕೊರೆಯನ್ನು ಪರಿಶೀಲಿಸಿದಾಗ ಅಲ್ಲಿ ಸೀತಾರಾಮ ಎಂಬವರ ಮನೆ ಬಳಿ 407 ಟೆಂಪೊ ಚಾಲಕ ಟೆಂಪೊವನ್ನು ಚಲಾಯಿಸಿಕೊಂಡು ಬರುತ್ತಿದ್ದವನು ಅಲ್ಲಿಯೆ ಟೆಂಪೊವನ್ನು ನಿಲ್ಲಿಸಿ ಓಡಿ ಹೋಗಿದ್ದಾನೆ. ಲಾರಿಯನ್ನು ಪರಿಶೀಲಿಸಿದಾಗ ಶಿಲೆ ಕಲ್ಲುಗಳು ತುಂಬಿರುವುದು ಗಮನಕ್ಕೆ ಬಂದಿರುತ್ತದೆ. ಇನ್ನು ಮರಕೊಂಬೆಯ ಕೊರೆಯಲ್ಲಿ ಸ್ಪೊಟಕ ಬಳಸಿ ಕಲ್ಲುಗಳನ್ನು ತೆಗೆದಿರುವುದು ಕಂಡು ಬಂದಿದ್ದು, ಈ ಬಗ್ಗೆ ವಿಚಾರಿಸಿದಾಗ ಇಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಇಲ್ಲದಿದ್ದರೂ ಕೃಷ್ಣ ಹಾಗೂ ಇತರರು ಸೇರಿ ಕಜ್ಕೆ ಬೈಲು ಹಾಗೂ ಕಜ್ಕೆ ಮರ ಕೊಂಬೆ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಸ್ಪೊಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಸಿರುವುದು ಖಚಿತವಾಗಿರುತ್ತದೆ. ಅಪರಾಧ ಪರಿಶೀಲನಾ ತಂಡದವರಿಗೆ ಸ್ಪೋಟಕ ವಸ್ತುಗಳ ಅವಶೇಷಗಳು ಲಭ್ಯವಾಗಿದ್ದರಿಂದ ಕೃಷ್ಣ ಹಾಗೂ ಆತನೊಂದಿಗೆ ಇದ್ದ ಇನ್ನೊರ್ವ ಮತ್ತು ಕಲ್ಲು ಸಾಗಾಟ ಮಾಡಿದ ಟೆಂಪೊ ಚಾಲಕನ ವಿರುದ್ದ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.























































































































error: Content is protected !!
Scroll to Top