ಕಾರ್ಕಳ : ವಿಪರೀತ ಮದ್ಯ ಸೇವನೆ ಮತ್ತು ಮೂರ್ಚೆ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈದು ಗ್ರಾಮದಲ್ಲಿ ಸಂಭವಿಸಿದೆ. ಗಣೇಶ್ (33) ನೇಣಿಗೆ ಶರಣಾದವರು. ಇವರಿಗೆ ವಿಪರೀತ ಕುಡಿತದ ಚಟವಿತ್ತು. ಅಲ್ಲದೆ ಕೆಲವು ವರ್ಷಗಳಿಂದ ಮೂರ್ಚೆ ರೋಗ ಕಾಯಿಲೆಯಿಂದ ಬಳಲುತ್ತಿದ್ದರು. ಆ. 15ರಂದು ಮನೆಗೆ ರಾತ್ರಿ 8 ಗಂಟೆಗೆ ಮದ್ಯ ಸೇವಿಸಿಕೊಂಡು ಬಂದು ಜಗುಲಿಯಲ್ಲಿ ಮಲಗಿರುತ್ತಾರೆ. ಆ. 16ರಂದು ಬೆಳಿಗ್ಗೆ 6 ಗಂಟೆಗೆ ಗಣೇಶ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿರುತ್ತದೆ. ವಿಪರೀತ ಮದ್ಯ ಸೇವನೆ ಹಾಗೂ ಮೂರ್ಚೆ ರೋಗದ ಕಾಯಿಲೆಯ ವಿಚಾರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈದು : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ



























































