ಅಗತ್ಯ ದಾಖಲೆ ಪತ್ರವಿದ್ದ ಬ್ಯಾಗ್‌ ಕಳೆದುಹೋಗಿದೆ

ಬ್ಯಾಗ್‌ ದೊರೆತಲ್ಲಿ ಮಾಹಿತಿ ನೀಡಿ ಸಹಕರಿಸುವಂತೆ ಮನವಿ

ಕಾರ್ಕಳ : ಪ್ರಮುಖ ದಾಖಲೆ ಪತ್ರ ಹೊಂದಿದ್ದ ಬ್ಯಾಗ್‌ ಜು. 21ರಂದು ಕಾರ್ಕಳ ತಾಲೂಕು ಆಫೀಸ್‌ ಜಂಕ್ಷನ್ ಬಳಿ ಕಳೆದು ಹೋಗಿದೆ. ಮಹಿಳೆಯೋರ್ವರು ಸ್ಕೂಟಿಯಲ್ಲಿ ತಾಲೂಕು ಆಫೀಸ್‌ ಮಾರ್ಗವಾಗಿ ಸಾಗುವಾಗ ದಾರಿ ಮಧ್ಯೆ ಕಪ್ಪು ಬಣ್ಣದ ಬ್ಯಾಗ್ ಕಳೆದುಕೊಂಡಿದ್ದು, ಬ್ಯಾಗ್ ನಲ್ಲಿ 2 ಮೊಬೈಲ್, ನಗದು, ಪಾನ್‌, ಆಧಾರ್‌ ಕಾರ್ಡ್‌ ಸೇರಿದಂತೆ ಅಗತ್ಯ ದಾಖಲೆಗಳಿತ್ತು. ಬ್ಯಾಗ್‌ ಯಾರಿಗಾದರೂ ಸಿಕ್ಕಲ್ಲಿ ಕಾರ್ಕಳ ಪೊಲೀಸ್‌ ಠಾಣೆಗೆ ಅಥವಾ 9844995533, 9980255418 ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಿ ಸಹಕರಿಸುವಂತೆ ಕೋರಲಾಗಿದೆ.













error: Content is protected !!
Scroll to Top