ಶಿರ್ವ : ನಾಯಿ ಶವವನ್ನು ಸ್ಕೂಟಿಗೆ ಕಟ್ಟಿ ಎಳೆದೊಯ್ದ ವ್ಯಕ್ತಿ

ಶಿರ್ವ: ಸತ್ತ ನಾಯಿಯನ್ನು ಸ್ಕೂಟಿಯ ಹಿಂಭಾಗಕ್ಕೆ ಕಟ್ಟಿಕೊಂಡು ಹೋಗುತ್ತಿರುವ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಶಿರ್ವದಲ್ಲಿ ನಡೆದಿದೆ ಎನ್ನಲಾದ ಈ ಘಟನೆಯಲ್ಲಿ ವ್ಯಕ್ತಿಯೊಬ್ಬ ನಾಯಿಯ ಶವವನ್ನು ಸರಪಳಿಯಿಂದ ಸ್ಕೂಟಿಯ ಹಿಂಭಾಗಕ್ಕೆ ಬಿಗಿದುಕೊಂಡು ಶಿರ್ವದ ಮುಖ್ಯರಸ್ತೆಯಲ್ಲೇ ಹೋಗುತ್ತಿರುವುದು ಕಾಣಿಸುತ್ತಿದೆ. ನಾಯಿಯನ್ನು ಅವನೇ ಕೊಂದಿದ್ದಾನಾ ಅಥವಾ ಸತ್ತ ಬಳಿಕ ಶವವನ್ನು ವಿಲೇವಾರಿ ಮಾಡಲು ಸಾಗಿಸುತ್ತಿದ್ದನಾ ಎಂದು ಗೊತ್ತಾಗಿಲ್ಲ.
ಈ ನಡುವೆ ಈ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂಬ ಮಾತು ಕೇಳಿಬರುತ್ತಿದೆ. ಮಾನಸಿಕ ಅಸ್ವಸ್ಥನಿಗೆ ವಾಹನ ಕೊಟ್ಟವರು ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಪ್ರಾಣಿಗಳ ಮೇಲೆ ಅವನು ತೋರಿಸಿ ಕ್ರೌರ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರಾಣಿ ದಯಾ ಸಂಘದವರು ಅವನ ವಿರುದ್ಧ ದೂರು ನೀಡುವ ಚಿಂತನೆಯಲ್ಲಿದ್ದಾರೆ.























































error: Content is protected !!
Scroll to Top