ಜು. 22-27 : ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಕಾಸ್ಮೆಟಾಲಜಿ ಶಿಬಿರ

ಕಾರ್ಕಳ : ವಿಶ್ವ ಚರ್ಮ ತ್ವಚೆ ಆರೋಗ್ಯ ದಿನದ ಪ್ರಯುಕ್ತ ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಚರ್ಮರೋಗ ವಿಭಾಗದಲ್ಲಿ ಜು. 22ರಿಂದ 27ರವರೆಗೆ ಬೆಳಗ್ಗೆ 9 ರಿಂದ ಸಂಜೆ 5ರ ತನಕ ಚರ್ಮರೋಗ ವಿಭಾಗದಲ್ಲಿ ಕಾಸ್ಮೆಟಾಲಜಿ (ಸೌಂದರ್ಯವರ್ಧಕ) ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ವೈಯಕ್ತಿಕರಿಸಿದ ಸಮಾಲೋಚನೆಯ ಜೊತೆಗೆ ಕೆಮಿಕಲ್ ಪೀಲ್ ಪ್ರೊಸೀಜರ್ ಮತ್ತು ತಜ್ಞರ ಸಮಾಲೋಚನೆ ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ.

ಸಾಮಾನ್ಯ ಚರ್ಮ ಸಂಬಂಧಿತ ಸಮಸ್ಯೆಗಳಾದ ಮೊಡವೆ, ಮುಖದ ಮೇಲಿನ ನೆರಿಗೆಗಳು, ಸುಕ್ಕುಗಳು, ರೇಖೆಗಳು, ಪಿಗಮೆಂಟೇಷನ್, ಮತ್ತು ಗಾಯದ ಗುರುತುಗಳು ಮುಂತಾದ ಸಮಸ್ಯೆಗಳ ಚಿಕಿತ್ಸೆಗೆ ಕೆಮಿಕಲ್ ಪೀಲ್ ಪ್ರೂಸೀಜರ್ ಬಹಳ ಪರಿಣಾಮಕಾರಿ ಆಗಿದೆ ಎಂದು ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳದ ಚರ್ಮ ರೋಗ ತಜ್ಞೆ ಡಾ. ಅನುಷಾ ಡಿಸೋಜಾ ಅವರು ತಿಳಿಸಿದ್ದಾರೆ.

ಶಿಬಿರದಲ್ಲಿ ಪೂರ್ವ ನಿಗಧಿ ಕಡ್ಡಾಯವಾಗಿದ್ದು, ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 08258-230583/9731601150 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.























































error: Content is protected !!
Scroll to Top