ಆನ್‌ಲೈನ್‌ನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

ಕಾರ್ಕಳ : ಆನ್‌ಲೈನ್‌ ವಂಚನೆಯಿಂದಾಗಿ ಮಹಿಳೆಯೋರ್ವರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಸಾಣೂರಿನಲ್ಲಿ ಸಂಭವಿಸಿದೆ. ಶಾಹಿಸ್ತಾ ಎಂಬವರು ಏ. 18ರಂದು ತಮ್ಮ ಪೇಸ್ ಬುಕ್ ಖಾತೆಯಲ್ಲಿ ವ್ಯಕ್ತಿಯೋರ್ವನು ತಿಳಿಸಿದಂತೆ ಕಂಟೈನರ್ ಖರೀದಿ ಮಾಡಲು 700 ರೂ. ಹಣವನ್ನು ಲಿಂಕ್ ಮೂಲಕ ಹಾಕಿದ್ದು, ಒಂದು ತಿಂಗಳ ಬಳಿಕ ಅವರ ಖಾತೆಗೆ 850 ರೂ. ಹಣ ವಾಪಾಸು ವರ್ಗಾವಣೆಯಾಗಿರುತ್ತದೆ. ನಂತರ ಶಾಹಿಸ್ತಾ ಅವರಿಗೆ ಜೂ. 16 ರಂದು ವಾಟ್ಸಾಪ್ ಗ್ರೂಪ್‌ನಿಂದ 5,00,069 ರೂ. ಹಣವನ್ನು ಹಾಕಿದರೆ, ಹದಿನೈದು ದಿನದ ನಂತರ 12,00,069 ರೂ. ಹಣವನ್ನು ವಾಪಾಸು ನೀಡುವುದಾಗಿ ತಿಳಿಸಿದ್ದು, ಅದರಂತೆ ಆತನ ಕೊಟಕ್ ಮಹೀಂದ್ರಾ ಬ್ಯಾಂಕ್ ಖಾತೆಗೆ 5,00,069 ರೂ. ಹಣವನ್ನು ಬ್ಯಾಂಕ್ ಮುಖಾಂತರ ವರ್ಗಾವಣೆ ಮಾಡಿದ್ದು, ಬಳಿಕ ಜೂ. 18ರಂದು ಗಂಡನ ಹೆಸರಿನಲ್ಲಿರುವ ಇಂಡಿಯನ್ ಓವರ್ಸಿಸ್ ಬ್ಯಾಂಕ್ ಖಾತೆಯಿಂದ 1,50,000 ರೂ. ಹಣವನ್ನು ವರ್ಗಾವಣೆ ಮಾಡಿದ್ದು, ಜೂ. 20ರಂದು ಶಾಹಿಸ್ತಾ ಗಂಡನ ಹೆಸರಿನಲ್ಲಿರುವ ಯೂನಿಯನ್ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮೂಲಕ ಆಪಾದಿತ ಅಶೋಕ್ ಎಂಬವರ ಬ್ಯಾಂಕ್ ಖಾತೆಗೆ 1,00,000 ರೂ. ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಆದರೆ ಆ ಬಳಿಕ ಆಪಾದಿತ ತನ್ನ ಮೊಬೈಲ್ ನಂಬರ್‌ ಸ್ವಿಚ್ ಆಫ್ ಮಾಡಿಕೊಂಡಿದ್ದು ಮಹಿಳೆಯಿಂದ ಪಡೆದ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



















































































error: Content is protected !!
Scroll to Top