ನಟ ರಕ್ಷಿತ್‌ ಶೆಟ್ಟಿ ವಿರುದ್ಧ ದೂರು ದಾಖಲು

ಬೆಂಗಳೂರು : ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ಖ್ಯಾತಿಯ ರಕ್ಷಿತ್ ಶೆಟ್ಟಿ ಮೇಲೆ ಹಾಡು ಕದ್ದ ಆರೋಪ ಹೊರಿಸಿ ಕೇಸ್‌ ದಾಖಲಿಸಲಾಗಿದೆ. ಪರಂವಾ ಸ್ಟುಡಿಯೋಸ್‌ ಅಡಿಯಲ್ಲಿ ಬ್ಯಾಚುಲರ್ ಪಾರ್ಟಿ ಸಿನೆಮಾವನ್ನು ರಕ್ಷಿತ್ ನಿರ್ಮಾಣ ಮಾಡಿದ್ದರು. ನಟ ದಿಗಂತ್, ಲೂಸ್ ಮಾದಾ ಯೋಗಿ ಹಾಗೂ ಅಚ್ಯುತ್ ಕುಮಾರ್‌ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಸಿನಿಮಾ ಇದಾಗಿದ್ದು, ದೊಡ್ಡ ಪರದೆಗಿಂತ ಒಟಿಟಿಯಲ್ಲಿ ಹೆಚ್ಚಿಗೆ ಸದ್ದು ಮಾಡಿತ್ತು. ಈ ಚಿತ್ರದ ಹಾಡು ನಕಲು ಎಂದು ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.
ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಇರುವ ಎರಡು ಹಾಡುಗಳ ವಿರುದ್ಧ ದೂರು ದಾಖಲಾಗಿದೆ. ಗಾಳಿ ಮಾತು ಹಾಗೂ ನ್ಯಾಯ ಎಲ್ಲಿದೆ ಎಂಬ ಹಾಡನ್ನು ಕದ್ದಿರುವ ಆರೋಪ ಹೊರಿಸಲಾಗಿದೆ. ನ್ಯಾಯ ಎಲ್ಲಿದೆ ಹಾಡು ಚಿತ್ರದ ಟೈಟಲ್ ಸಾಂಗ್ ಆಗಿದ್ದು, ಒಮ್ಮೆ ನಿನ್ನನ್ನೂ ಕಣ್ತುಂಬ ನೋಡುವಾಸೆ ಎಂದು ರೋಮ್ಯಾಂಟಿಕ್ ಸಾಂಗ್ ಆಗಿದ್ದು, ಇದನ್ನು ಕದ್ದಿದ್ದಾರೆ ಎನ್ನಲಾಗಿದೆ. ಬ್ಯಾಚುಲರ್ ಪಾರ್ಟಿ ಚಿತ್ರದ ಒಟಿಟಿ ಕಾಪಿರೈಟ್ಸ್‌ ಮಾಲೀಕತ್ವ ಪಡೆದಿರುವವರು ದೂರು ನೀಡಿದ್ದಾರೆ.
ಈಗಾಗಲೆ ನವೀನ್‌ ಕುಮಾರ್‌ ಎಂಬವರ ಜೊತೆ ಮಾತುಕತೆ ನಡೆದಿದೆ. ಹಾಡುಗಳ ಕಾಪಿರೈಟ್‌ ಪಡೆದು ಮಾರಾಟ ಮಾಡುವ ನವೀನ್‌ ಕುಮಾರ್ ಅನುಮತಿ ಇಲ್ಲದೆ ಹಾಡನ್ನು ಚಿತ್ರದಲ್ಲಿ ಬಳಸಿದ್ದಾರೆ ಎಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರದಲ್ಲೂ ಹಂಸಲೇಖರ ಒಂದು ಟ್ಯೂನ್‌ ಕದ್ದ ಅಪವಾದ ರಕ್ಷಿತ್‌ ಶೆಟ್ಟಿ ಮೇಲೆ ಹೊರಿಸಲಾಗಿತ್ತು.



















































































error: Content is protected !!
Scroll to Top