ಕಾರ್ಕಳ : ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಅಪಾರ ಹಾನಿ ಸಂಭವಿಸಿದೆ. ಈದು ಗ್ರಾಮದ ಗೋಪಿಕಾ ಅವರ ಅಡಿಕೆ ಕೃಷಿ ಹಾನಿಗೊಳಗಾಗಿದ್ದು 22 ಸಾ. ರೂ. ನಷ್ಟ ಸಂಭವಿಸಿದೆ. ಬೋಳ ಗ್ರಾಮದ ಪಿಲಿಯೂರು ಪದವಿನ ನಾರಾಯಣ ಎಂಬವರ ವಾಸ್ತವ್ಯದ ಮನೆಯ ಮೇಲ್ಚಾವಣಿ ಕುಸಿದು ಬಿದ್ದು 30 ಸಾ. ರೂ. ನಷ್ಟ ಸಂಭವಿಸಿದೆ. ಕಣಜಾರು ಗ್ರಾಮದ ಕಲ್ಯಾಣಿ ಅವರ ಮನೆಗೆ ಮರ ಬಿದ್ದು 30 ಸಾ. ರೂ. ನಷ್ಟ ಉಂಟಾಗಿದೆ. ನೀರೆ ಗ್ರಾಮದಲ್ಲಿ ಕಾಲು ಸಂಕ ಒಂದು ಹಾನಿಗೊಳಗಾಗಿದೆ.
ಮಳೆ ಪ್ರಮಾಣ
ಕಾರ್ಕಳ 28.6 ಮಿ. ಮೀ., ಇರ್ವತ್ತೂರು 27.2 ಮಿ.ಮೀ., ಅಜೆಕಾರು 44.2 ಮಿ.ಮೀ., ಸಾಣೂರು 49.2 ಮಿ. ಮೀ., ಕೆದಿಂಜೆ 26.8 ಮಿ. ಮೀ., ಮುಳಿಕಾರು 24.8 ಮಿ. ಮೀ. ಹಾಗೂ ಕೆರ್ವಾಶೆಯಲ್ಲಿ 24.8 ಮಿ. ಮೀ. ಮಳೆ ದಾಖಲಾಗಿದೆ.


































