ಮುಳ್ಕಾಡು ಶಾಲೆಯಲ್ಲಿ ಕರಾಟೆ ತರಬೇತಿ ಉದ್ಘಾಟನೆ

ಕಾರ್ಕಳ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜು. 5ರಂದು ಕರಾಟೆ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್‌ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಸದೃಢತೆ ಮತ್ತು ಆತ್ಮರಕ್ಷಣೆಯ ನಿಟ್ಟಿನಲ್ಲಿ ಶಾಲೆಯಲ್ಲಿ ಕರಾಟೆ ಶಿಕ್ಷಣ ನೀಡುತ್ತಿರುವುದು ಸಂಸದಾಯಕ ಎಂದರು.
ಕರಾಟೆ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ಆರೋಗ್ಯಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಕರಾಟೆ ಸಹಕಾರಿ. ಅಲ್ಲದೆ ಆತ್ಮ ರಕ್ಷಣೆಗಾಗಿ ವಿದ್ಯಾರ್ಥಿಗಳು ಕರಾಟೆ ಕಲಿಯುವುದ ಅವಶ್ಯ ಎಂದರು. ಮುಖ್ಯ ಶಿಕ್ಷಕ ಜನಾರ್ಧನ ಬೆಳಿರಾಯ ಸ್ವಾಗತಿಸಿದರು. ಸುಭಾಸ್ ಕಾರ್ಯಕ್ರಮ ನಿರೂಪಿಸಿ, ನಿಶಾ ಇವರು ವಂದಿಸಿದರು. ಶ್ವೇತಾ ಪ್ರಫುಲ್ಲ, ರೂಪ, ಕಲಾವತಿ ಸಹಕರಿಸಿದರು.







































































error: Content is protected !!
Scroll to Top