ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿ ಕಿರುಕುಳ
ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಐದು ತಿಂಗಳು ಅಶ್ಲೀಲ ಸಂದೇಶಗಳನ್ನು ಕಳುಹಿಸಿ ದರ್ಶನ್ ಪ್ರೇಯಸಿ ಪವಿತ್ರಾ ಗೌಡಗೆ ಕಾಟ ಕೊಟ್ಟಿದ್ದ ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ.
ಕಳೆದ ಫೆಬ್ರವರಿಯಿಂದ ಸುಮಾರು 200ಕ್ಕೂ ಹೆಚ್ಚು ಅಶ್ಲೀಲ, ಅಸಭ್ಯ ಮೆಸೇಜ್ಗಳು ಪವಿತ್ರಾ ಗೌಡಳ ಮೊಬೈಲ್ಗೆ ಬಂದಿದ್ದವು ಎಂಬುದು ತನಿಖೆ ವೇಳೆ ಬಯಲಾಗಿದೆ.
ರೇಣುಕಾಸ್ವಾಮಿ ಮೆಸೇಜ್ಗಳಿಗೆ ಪವಿತ್ರಾ ಗೌಡ ರಿಪ್ಲೈ ಮಾಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೇಣುಕಾಸ್ವಾಮಿ ಮೆಸೇಜ್ ಜೊತೆ ಅಶ್ಲೀಲ ಫೋಟೊ ಕೂಡ ರವಾನಿಸಲಾರಂಭಿಸಿದ್ದ. ಇದರಿಂದ ಕೋಪಗೊಂಡ ಪವಿತ್ರಾ ಗೌಡ ಈ ವಿಷಯವನ್ನು ಪವನ್ಗೆ ಹೇಳಿದ್ದಾಳೆ.
ನಂತರ ಪವನ್, ಪವಿತ್ರಾ ಗೌಡ ರೀತಿ ಚಾಟ್ ಮಾಡಿದ್ದ. ರಿಪ್ಲೈ ಬಂದ ಖುಷಿಗೆ ರೇಣುಕಾಸ್ವಾಮಿ ಕೂಡ ಚಾಟ್ ಮಾಡ್ತಿದ್ದ. ಹೀಗೆ ಮಾತಾಡ್ತಾ ರೇಣುಕಾಸ್ವಾಮಿಗೆ ಪವನ್ ಪೋಟೊ ಕಳುಹಿಸುವಂತೆ ಹೇಳಿದ್ದಾನೆ. ಅಂತೆಯೇ ರೇಣುಕಾಸ್ವಾಮಿ ತನ್ನ ಫೋಟೋವನ್ನು ಕಳುಹಿಸಿದ್ದಾನೆ. ಫೋಟೋ ಸಿಕ್ಕ ಮೇಲೆ ದರ್ಶನ್ ಸಹಚರರು ಅವನನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ಸಂಚು ರೂಪಿಸಿದ್ದರು. ಅಂತಿಮವಾಗಿ ಇದು ರೇಣುಕಾಸ್ವಾಮಿ ಕೊಲೆಯಲ್ಲಿ ಅಂತ್ಯವಾಗಿದೆ.





































