ಕಾರ್ಕಳ : ಮಾಳ ಕೂಡಬೆಟ್ಟು ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಂಪೇಗೌಡ ಅವರ 515 ನೇ ಜಯಂತಿ ಆಚರಿಸಲಾಯಿತು. ನಾಡಪ್ರಭು ಕೆಂಪೇಗೌಡ ಅವರ ಜೀವನ ಮತ್ತು ಸಾಧನೆ, ಕನ್ನಡ ಭಾಷೆ ಮತ್ತು ಸಾಹಿತ್ಯ ಲೋಕಕ್ಕೆ ಅವರ ಕೊಡುಗೆಗಳನ್ನು ಶಾಲೆಯ ಹಿರಿಯ ಶಿಕ್ಷಕ ಶ್ರೀ ರಾಧಾಕೃಷ್ಣ ಜೋಶಿ ಪ್ರಾರ್ಥನಾ ಸಭೆಯಲ್ಲಿ ತಿಳಿಸಿದರು. ನಾಡು ಮತ್ತು ನುಡಿಗಾಗಿ ಹೋರಾಟ ಮಾಡಿದ ಅನೇಕ ಮಹಾತ್ಮರ ಜೀವನದ ಸಾರವನ್ನು ತಿಳಿದುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು. ಮುಖ್ಯಶಿಕ್ಷಕಿ ಪ್ರಭಾವತಿ, ಸಹ ಶಿಕ್ಷಕರು, ಮಕ್ಕಳು ಹಾಜರಿದ್ದರು.
ಪಿ.ಎಂ.ಶ್ರೀ ಶಾಲೆಯಲ್ಲಿ ಕೆಂಪೇಗೌಡ ಜಯಂತಿ ಆಚರಣೆ





































