ಚಾರಣ ದುರಂತ : ಮೃತರಲ್ಲಿ ಓರ್ವ ಕುಂದಾಪುರದವರು

ಉಡುಪಿ : ಉತ್ತರಾಖಂಡದ ಸಹಸ್ತ್ರ ತಾಲ್ ಶಿಖರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಮೃತಪಟ್ಟ 9 ಮಂದಿ ಚಾರಣಿಗರಲ್ಲಿ ಕುಂದಾಪುರ ಮೂಲದ ವ್ಯಕ್ತಿಯೂ ಇದ್ದಾರೆ. ಕುಂದಾಪುರದ ಕುಂಭಾಶಿಯ ಪದ್ಮನಾಭ ಭಟ್ ಮೃತ ದುರ್ದೈವಿ.
ಉತ್ತರಖಂಡಕ್ಕೆ ಚಾರಣಕ್ಕೆಂದು ತೆರಳಿದ್ದ 22 ಮಂದಿಯ ಪೈಕಿ ಪದ್ಮನಾಭ ಭಟ್ ಕೂಡ ಒಬ್ಬರಾಗಿದ್ದರು. ಮೂಲತಃ ಕುಂದಾಪುರದವರಾಗಿರುವ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಪದ್ಮನಾಭ ಅವರು ಮೇ 29ರಂದು ಉತ್ತರಖಂಡದ ಸಹಸ್ತ್ರ ತಾಲ್ ಶಿಖರಕ್ಕೆ ಚಾರಣಕ್ಕೆಂದು ತೆರಳಿದ್ದರು. ಚಾರಣ ಮುಗಿಸಿ ಶಿಖರದಿಂದ ಕೆಳಗೆ ಬರುವಾಗ ಹವಾಮಾನ ವೈಪರೀತ್ಯದಿಂದ ಈ ದುರ್ಘಟನೆ ಸಂಭವಿಸಿದ್ದು, ಕರ್ನಾಟಕದ ನಾಲ್ವರು ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿದ್ದರು.
9 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 4 ಮೃತದೇಹಗಳು ದಿಲ್ಲಿಯಿಂದ 2 ಪ್ರತ್ಯೇಕ ವಿಮಾನಗಳಲ್ಲಿ ಬೆಂಗಳೂರಿಗೆ ಬಂದಿವೆ. ಈಗಾಗಲೇ ಪದ್ಮನಾಭ್ ಭಟ್‌ ಅವರ ಮೃತದೇಹವನ್ನು ಹೊರತುಪಡಿಸಿ ಉಳಿದ ಮೂವರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪದ್ಮನಾಭ್ ಅವರ ಮೃತದೇಹವನ್ನು ಕುಂದಾಪುರಕ್ಕೆ ತೆಗೆದುಕೊಂಡು ಬರಲು ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

















































error: Content is protected !!
Scroll to Top