ಬೈಕ್‌, ಮೊಬೈಲ್‌ ಬೀಚ್‌ನಲ್ಲಿ ಬಿಟ್ಟು ಯುವಕ ನಾಪತ್ತೆ

ಕಾಪು : ಯುವಕನೊಬ್ಬ ಕಾಪು ಬೀಚ್‌ನಲ್ಲಿ ಬೈಕ್‌, ಮೊಬೈಲ್‌ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಬಿಟ್ಟು ನಾಪತ್ತೆಯಾಗಿದ್ದು, ನಿನ್ನೆಯಿಂದ ಅವನಿಗಾಗಿ ಬೀಚ್‌ನುದ್ದಕ್ಕೂ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಕಾಪು ಪಡುಗ್ರಾಮ ನಿವಾಸಿ ತುಳಸಿ ಸಾಲ್ಯಾನ್‌ ಎಂಬವರ ಪುತ್ರ 20ರ ಹರೆಯದ ಕರಣ್‌ ಸಾಲ್ಯಾನ್‌ ನಾಪತ್ತೆಯಾಗಿರುವ ಯುವಕ. ಗುರುವಾರ ರಾತ್ರಿಯಿಂದೀಚೆಗೆ ಈತ ನಾಪತ್ತೆಯಾಗಿದ್ದು, ಶುಕ್ರವಾರ ಬೆಳಗ್ಗೆ ಹುಡುಕಿದಾಗ ಕಾಪು ಬೀಚ್‌ನಲ್ಲಿ ಅವನ ಮೊಬೈಲ್‌ ಮತ್ತು ಪರ್ಸ್‌ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಯಿ ತುಳಸಿ ಸಾಲ್ಯಾನ್‌ ನೀಡಿದ ದೂರಿನ ಪ್ರಕಾರ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.







































































error: Content is protected !!
Scroll to Top