ಅಣ್ಣಾಮಲೈ ಕೊಯಂಬತ್ತೂರಿನಿಂದ ಸ್ಪರ್ಧೆ

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ತಮಿಳುನಾಡಿನ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಕೊಯಂಬತ್ತೂರಿನಿಂದ ಕಣಕ್ಕಿಳಿಯಲಿದ್ದಾರೆ.
ರಾಜ್ಯಪಾಲೆ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದ ತಮಿಳಿಸೈ ಸೌಂದರರಾಜನ್ ಅವರು ಚೆನ್ನೈ ದಕ್ಷಿಣದಿಂದ ಮತ್ತು ನೀಲಗಿರಿಯಿಂದ ಕೇಂದ್ರ ಸಚಿವ ಎಲ್. ಮುರುಗನ್ ಸ್ಪರ್ಧಿಸಲಿದ್ದಾರೆ. ಕನ್ಯಾಕುಮಾರಿಯಿಂದ ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಸ್ಪರ್ಧಿಸಲಿದ್ದಾರೆ. ವೆಲ್ಲೂರಿನಿಂದ ಎ. ಸಿ. ಶಣ್ಮುಗಂ, ಕೃಷ್ಣಗಿರಿ ಸಿ. ನರಸಿಂಹನ್‌, ಪೆರಂಬಲೂರ್‌ನಿಂದ ಟಿ. ಆರ್. ಪಾರಿವೆಂದರ್‌, ತೂತುಕುಡಿಯಿಂದ ನೈನರ್‌ ನಾಗೇಂದ್ರನ್‌ ಸ್ಪರ್ಧೆ ಮಾಡಲಿದ್ದಾರೆ.
ಅಣ್ಣಾಮಲೈ ಕಾರ್ಕಳದಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದರು. ಬಳಿಕ ಉಡುಪಿ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದರು. ಬಹಳ ಖಡಕ್‌ ಅಧಿಕಾರಿ ಎಂದು ಜನಪ್ರಿಯರಾಗಿದ್ದ ಅಣ್ಣಾಮಲೈ ಬಳಿಕ ಪೊಲೀಸ್‌ ಕೆಲಸಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ಸೇರಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದಾರೆ.













































































error: Content is protected !!
Scroll to Top