ಮಾ. 24 : ಎಬಿವಿಪಿ ಕಾರ್ಕಳ ತಾಲೂಕು – ಬಲಿದಾನ್‌ ಟ್ರೋಫಿ ಕಬ್ಬಡಿ ಪಂದ್ಯಾಟ

ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಕಳ ತಾಲೂಕು ಇದರ ವತಿಯಿಂದ ಬಲಿದಾನ್‌ ದಿವಸದ ಪ್ರಯುಕ್ತ ಪ್ರೊ ಮಾದರಿಯ ಕಾಲೇಜು ವಿದ್ಯಾರ್ಥಿಗಳ ಮಂಗಳೂರು ವಿಭಾಗ ಮಟ್ಟದ ಮ್ಯಾಟ್‌ ಕಬ್ಬಡಿ ಪಂದ್ಯಾಟ ಬಲಿದಾನ್‌ ಟ್ರೋಫಿ ಮಾ. 24ರಂದು ಕಾರ್ಕಳದ ಶ್ರೀ ರಾಮ ಸಭಾಭವನದಲ್ಲಿ ನಡೆಯಲಿದೆ.

ಬಹುಮಾನ
ಪ್ರಥಮ – 10,001 ರೂ. ನಗದು ಮತ್ತು ಬಲಿದಾನ್ ಟ್ರೋಫಿ
ದ್ವಿತೀಯ – 6,001 ರೂ. ನಗದು ಮತ್ತು ಬಲಿದಾನ್ ಟ್ರೋಫಿ
ತೃತೀಯ – 4,001 ರೂ. ನಗದು ಮತ್ತು ಬಲಿದಾನ್ ಟ್ರೋಫಿ
ಚತುರ್ಥ – 2,001 ರೂ. ನಗದು ಮತ್ತು ಬಲಿದಾನ್ ಟ್ರೋಫಿ
ಇದರೊಂದಿಗೆ ಉತ್ತಮ ಹಿಡಿತಗಾರ, ಉತ್ತಮ ದಾಳಿಗಾರ ಮತ್ತು ಉತ್ತಮ ಆಲ್‌ರೌಂಡರ್‌ ಪ್ರಶಸ್ತಿ ಹಾಗೂ ಶಿಸ್ತಿನ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುವುದು.

ವಿಶೇಷ ಸೂಚನೆ
ಮಂಗಳೂರು ವಿಭಾಗದಲ್ಲಿ (ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆ) ವ್ಯಾಸಂಗ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
ಕಾಲೇಜು ಐ.ಡಿ. ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಕಡ್ಡಾಯ
ಮೊದಲು ಹೆಸರು ನೋಂದಾಯಿಸಿದ 28 ತಂಡಗಳಿಗೆ ಮಾತ್ರ ಅವಕಾಶ
800 ರೂ. ಪ್ರವೇಶ ಶುಲ್ಕ ಇರಲಿದೆ.
ತಂಡವನ್ನು ನೋಂದಾಯಿಸಲು 20-03-2024 ಕೊನೆಯ ದಿನಾಂಕ
ತೀರ್ಪುಗಾರರ ಮತ್ತು ಆಯೋಜಕರ ತೀರ್ಮಾನ ಅಂತಿಮ
ಹೆಚ್ಚಿನ ಮಾಹಿತಿಗಾಗಿ 8861490841, 8310605657 ಅಥವಾ 9148926877 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



















































































error: Content is protected !!
Scroll to Top