ಕಾರ್ಕಳದ ಅಯ್ಯೋ ಶ್ರದ್ಧಾ ಅವರಿಗೆ ಅತ್ಯಂತ ಸೃಜನಶೀಲ ಕ್ರಿಯೇಟರ್‌ ಪ್ರಶಸ್ತಿ

ದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾ. 8ರಂದು ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ರಾಜ್ಯದ ಪ್ರಖ್ಯಾತ ಆರ್‌ಜೆ ಹಾಗೂ ಕಂಟೆಂಟ್‌ ಕ್ರಿಯೇಟರ್‌ ‘ಅಯ್ಯೋ ಶ್ರದ್ಧಾ’ ಎಂದೇ ಫೇಮಸ್‌ ಆಗಿರುವ ಕಾರ್ಕಳದ ಶ್ರದ್ಧಾ ಜೈನ್‌ ಅವರಿಗೆ ಮಹಿಳಾ ವಿಭಾಗದಲ್ಲಿ ಅತ್ಯಂತ ಸೃಜನಶೀಲ ಕ್ರಿಯೇಟರ್‌ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಶ್ರದ್ಧಾ ಅವರನ್ನು ವೇದಿಕೆಗೆ ಸ್ವಾಗತಿಸುವ ವೇಳೆ ಸ್ವತಃ ಪ್ರಧಾನಿ ಮೋದಿ ಅವರೇ ‘ಅಯ್ಯೋ..’ ಎಂದು ಹೇಳಿದ್ದು ವಿಶೇಷವಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅತ್ಯಂತ ಮನರಂಜನಾತ್ಮಕವಾಗಿದ್ದರು. ಕಂಟೆಂಟ್‌ ಕ್ರಿಯೆಟರ್‌ಗೆ ಅಗತ್ಯವಾಗಿದ್ದ ಮಾತುಗಳು ಮೋದಿ ಅವರಿಂದ ಸರಾಗವಾಗಿ ಬರುತ್ತಿದ್ದವು. ಹೆಚ್ಚಿನ ಎಲ್ಲಾ ಕಂಟೆಂಟ್‌ ಕ್ರಿಯೆಟರ್‌ಗಳು ವೇದಿಕೆಗೆ ಬರುವಾಗ ಅವರ ಕಾರ್ಯಕ್ರಮದ ವಿಶೇಷತೆಗಳನ್ನು ಮೋದಿ ಹೇಳುತ್ತಿದ್ದರು. ಅದರೊಂದಿಗೆ ತಾವು ಸ್ಪೂರ್ತಿದಾಯಕ ಅಂಶಗಳಿರುವ ಕಂಟೆಂಟ್‌ಗಳನ್ನೇ ಇಷ್ಟಪಡುವುದಾಗಿ ತಿಳಿಸಿದರು.

ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ಶ್ರದ್ಧಾ, “ಎಷ್ಟೇ ಒತ್ತಡದ ಪರಿಸ್ಥಿತಿ ಇದ್ದರೂ, ನಾವು ಭಾರತೀಯರು ನಗುವ ಮಾರ್ಗವನ್ನು ಕಂಡುಕೊಳ್ಳುತ್ತಲೇ ಇರುತ್ತೇವೆ’ ಎಂದು ಹೇಳಿದರು. ಶ್ರದ್ಧಾ ಜೈನ್ ಅವರು ಅಯ್ಯೋ ಶ್ರದ್ಧಾ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ.







































































error: Content is protected !!
Scroll to Top