ಕಾರ್ಕಳ : ನೀರೆ ಗ್ರಾಮ ಪಂಚಾಯತ್‌ನ 2023-2024ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಸುವರ್ಣ ಸಮುದಾಯ ಭವನದಲ್ಲಿ ಮಾ. 6ರಂದು ನಡೆಯಿತು.
ಸಭೆಯ ನೋಡೆಲ್ ಅಧಿಕಾರಿ ತೋಟಗಾರಿಕಾ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರಾವ್ ಮಾತನಾಡಿ, ಗ್ರಾಮ ಸಭೆಯಲ್ಲಿ ಹೆಚ್ಚಿನ ಜನರು ಪಾಲ್ಗೊಂಡು ಇಲಾಖೆಯ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು. ಅಲ್ಲದೆ, ತೋಟಗಾರಿಕಾ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು ಮಾತನಾಡಿ, ಗ್ರಾಮ ಸಭೆಯ ಮಹತ್ವ ಮತ್ತು ಗ್ರಾಮಸಭೆಯಲ್ಲಿ ಪ್ರತಿಯೊಬ್ಬರ ಮತದಾರರ ಪಾಲ್ಗೊಳ್ಳುವಿಕೆಯ ಅಗತ್ಯತೆಯನ್ನು ವಿವರಿಸುತ್ತಾ ಜನರಿಗೆ ಸಿಗುವ ಸವಲತ್ತುಗಳನ್ನು ಸದಸ್ಯರ ಸಹಕಾರದೊಂದಿಗೆ ಆದ್ಯತಾ ಮೇರೆಗೆ ವಿತರಣೆ ಮಾಡಲಾಗುವುದೆಂದು ಸೂಚಿಸಿದರು.
ಸಭೆಯಲ್ಲಿ ಶೇಕಡಾ 5%ರ ನಿಧಿಯ ಫಲಾನುಭವಿಗಳಿಗೆ ಹಾಗೂ ಶೇಕಡಾ 25%ರ ನಿಧಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಹಾಯಧನ ಹಾಗೂ ಬ್ಯಾಗ್‌ನ್ನು ವಿತರಿಸಲಾಯಿತು. ಆರೋಗ್ಯ ಇಲಾಖೆಯ ಜೀನಾ, ಗ್ರಾಮಕರಣಿಕ ಸುಚಿತ್ರಾ, ಮೆಸ್ಕಾಂ ಇಲಾಖೆಯ ಮ್ಯಾಕ್ಸಿ, ಕೃಷಿ ಇಲಾಖೆಯ ರಮೇಶ್ ಉಳ್ಳಾಗಡ್ಡಿ, ಲೂರ್ಡ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಹೇರಾಲ್ಡ್ ಪಿರೇರಾ, ಡಿಡಿಆರ್‌ಸಿ ಯ ಆಡಿಯೊಲಾಜಿಸ್ಟ್ ನೆಲಿಶಾ ಮೆರಿಲ್, ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬನಶಂಕರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಎಲ್‌ಸಿಆರ್‌ಪಿ, ಎಂಬಿಕೆ ಒಕ್ಕೂಟದ ಪ್ರತಿನಿಧಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ಗಣೇಶ್ ಪ್ರಾರ್ಥಿಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿಯ ಅಂಕಿತಾ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಮಣಿ ವರದಿ ಮಂಡಿಸಿದರು. ಪಂಚಾಯತ್ ಸದಸ್ಯ ಶಿವಪ್ರಸಾದ್ ರಾವ್ ವಂದಿಸಿದರು.










































