ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಶತಾಯುಷಿ ಅಜ್ಜಿ ಪಾದಯಾತ್ರೆ

ಚಾಮರಾಜನಗರ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕೆಂದು ಹಾರೈಸಿ 102 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ.
ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಮಾದಪ್ಪನ ದರ್ಶನಕ್ಕೆ 18 ಕಿಲೋಮೀಟರ್ ಕಾಲ್ನಡಿಗೆ ಮೂಲಕ ಶತಾಯುಷಿ ಅಜ್ಜಿ ಕ್ರಮಿಸಿದ್ದಾರೆ. ಮೋದಿಗಾಗಿ ಪಾದಯಾತ್ರೆ ನಡೆಸಿದ ಅಜ್ಜಿಯನ್ನು ತುಮಕೂರು ಜಿಲ್ಲೆ ತಿಪಟೂರು ಮೂಲದ ಪಾರ್ವತಮ್ಮ ಎಂದು ಗುರುತಿಸಲಾಗಿದೆ. ಅಜ್ಜಿ ಪಾದಯಾತ್ರ ಮಾಡುತ್ತಿಒರುವ ವೀಡಿಯೋ ತುಣುಕುಗಳು ಭಾರಿ ವೈರಲ್‌ ಆಗಿವೆ.

ದೇಶಕ್ಕೆ ಒಳ್ಳೆಯದಾಗಬೇಕು. ರೈತರಿಗೆ ಒಳ್ಳೆಯದಾಗಬೇಕು. ಮಳೆ, ಬೆಳೆ ಚೆನ್ನಾಗಿ ಆಗಬೇಕು. ಹಾಗೆ ಆದರೆ ಅಲ್ಲವೇ ರೈತರಿಗೆ ಒಳಿತಾಗುವುದು? ಅದೇ ರೀತಿ ಕಾಡು ಪ್ರಾಣಿಗಳಿಗೂ ಒಳ್ಳೆಯದಾಗಬೇಕು. ಅವುಗಳಿಗೆ ಕುಡಿಯುವ ನೀರು ದೊರೆಯುವಂತಾಗಬೇಕು. ಈ ಎಲ್ಲ ಬೇಡಿಕೆಗಳನ್ನು ದೇವರ ಮುಂದಿಟ್ಟುಕೊಂಡು ಮಹದೇಶ್ವರನ ದರ್ಶನಕ್ಕೆ ಬರುತ್ತಿದ್ದೇನೆ ಎಂದು ಪಾರ್ವತಮ್ಮ ಹೇಳಿದ್ದಾರೆ.
ದೇಶಕ್ಕೆ ಒಳ್ಳೆಯದಾಗಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಅಜ್ಜಿ ಹೇಳಿದ್ದಾರೆ. ನಿಮ್ಮ ಆಶೀರ್ವಾದ ಇದ್ದರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಿಯೇ ಆಗುತ್ತಾರೆ ಎಂದು ಸ್ಥಳದಲ್ಲಿ ಇದ್ದವರು ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲೂ ಇರಲಿ ಅಜ್ಜಿ ಎಂದು ಸಹ ಯಾತ್ರಿಗಳು ಅಜ್ಜಿಯಲ್ಲಿ ಬೇಡಿಕೊಂಡಿದ್ದಾರೆ. ಅಲ್ಲದೆ, ವೃದ್ಧೆಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಿಪಟೂರು ಮೂಲದ ಪಾರ್ವತಮ್ಮ ಸುಮಾರು 5-6 ವರ್ಷಗಳಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿದ್ದಾರಂತೆ.
ಅಜ್ಜಿಯ ಸಾಮಾಜಿಕ ಕಾಳಜಿ, ಮೋದಿ ಅಭಿಮಾನ ಹಾಗೂ ಮಾದಪ್ಪನ ಕುರಿತ ಭಕ್ತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.



















































































error: Content is protected !!
Scroll to Top