ಜೆಇಇ ಮೈನ್‌ : ಬಿ-ಆರ್ಕ್‌ & ಬಿ-ಪ್ಲ್ಯಾನಿಂಗ್‌

ಮೂಡುಬಿದಿರೆ : ರಾಷ್ಟ್ರಮಟ್ಟದಲ್ಲಿ ಎನ್.ಟಿ.ಎ ನಡೆಸುವ ಬಿ – ಆರ್ಕ್‌ ಮತ್ತು ಬಿ – ಪ್ಲಾನಿಂಗ್‌ ಪರೀಕ್ಷೆಯ ಫಲಿತಾಂಶ ಮಾ. 6ರಂದು ಪ್ರಕಟಗೊಂಡಿದ್ದು, ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಶಾಂತ್‌ ಪಿ. ಹೆಗಡೆ ಅವರು ಕ್ರಮವಾಗಿ 92.3017258, 98.9708956 ಪರ್ಸೆಂಟೈಲ್‌ನ್ನು ಪಡೆದಿರುತ್ತಾರೆ. ಇವರು ಈ ಹಿಂದೆ ನಡೆದ ಜೆಇಇ ಮೈನ್ಸ್ ಅರ್ಹತಾ ಪರೀಕ್ಷೆಯಲ್ಲಿ 99.32 ಪರ್ಸೆಂಟೈಲ್‌ ಪಡೆದಿರುತ್ತಾರೆ. ನಿಶಾಂತ್‌ ಡಾ| ಪ್ರಶಾಂತ್ ಆರ್. ಹೆಗಡೆ ಹಾಗೂ ಕೊಕಿಲ ಹೆಗಡೆಯವರ ಪುತ್ರ.
ಸಾಧಕ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿರುತ್ತಾರೆ.































































































error: Content is protected !!
Scroll to Top